24ನೇ ತಾರೀಖು ” ದಿ ಸೌಂಡ್ ಆಫ್ ಕೆಯಾಸ್ “
ಅನ್ನೋ ಹೊಡ ಸೌಂಡಿಂಗ್ ಇರೋ,ರಘು ದೀಕ್ಷಿತ್ ಕಂಪೋಸ್ ಮಾಡಿ ಹಾಡಿರೋ, ವಾಸುಕಿ ವೈಭವ್ ಸಾಹಿತ್ಯ ಬರೆದಿರೋ ಲಿರಿಕಲ್ ವಿಡಿಯೋ ರಿಲೀಸ್ ಆಗ್ತಿದೆ. ರಘು ದೀಕ್ಷಿತ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ರಿಲೀಸ್ ಆಗ್ತಿದೆ.

ಈಗಾಗ್ಲೇ ವಿಡಿಯೋ ಹಾಡುಗಳಿಂದ ದೊಡ್ಡ ನಿರೀಕ್ಷೆಯನ್ನ ಹುಟ್ಟಿಸಿರೋ ನಿನ್ನ ಸನಿಹಕೆ ಟೀಮ್ ಇದೀಗ ಇದೊಂದು ಪೋಸ್ಟರ್ ಬಿಟ್ಟು, ಇದು ಮಾಮೂಲಿ ಸಿನಿಮಾ ಅಲ್ಲ. ಇದ್ರಲ್ಲೇನೋ ಸ್ಪೆಷಲ್ ಇದೆ ಅನ್ನೋದನ್ನ ತೋರಿಸ್ತಿದೆ.
ಸೂರಜ್ ಗೌಡ ನಟಿಸಿ ನಿರ್ದೇಶಿಸಿರೋ ಈ ಚಿತ್ರದಲ್ಲಿ ಧನ್ಯರಾಮ್ ಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ಸದ್ಯ ಸೆನ್ಸಾರ್ ಅಂಗಳದಲ್ಲಿರೋ ನಿನ್ನ ಸನಿಹಕೆ ಇಷ್ಟರಲ್ಲೇ ಟ್ರೈಲರ್ ರಿಲೀಸ್ ಮಾಡಿ ರಿಲೀಸ್ ಡೇಟ್ ಅನೌನ್ಸ್ ಮಾಡೋ ಸನ್ನಾಹದಲ್ಲಿದೆ.