ಇದೇ ಮಹಾಶಿವರಾತ್ರಿ ಹಬ್ಬದ ದಿನ, ಮಾರ್ಚ್ 11 ರಂದು ಅದ್ಧೂರಿಯಾಗಿ ರಿಲೀಸ್ ಆಗ್ತಾ ಇರೋ ರಾಬರ್ಟ್ ಚಿತ್ರದ ಪ್ರಮೋಷನ್ ಸಲುವಾಗಿ ಬಿಡುಗಡೆಗೆ 10 ದಿನ ಮುಂಚಿತವಾಗಿ, ಫೆ. 28 ರಂದು ಹುಬ್ಬಲ್ಳಿಯಲ್ಲಿ ಅದ್ಧೂರಿ ಪ್ರೀ-ರಿಲೀಸ್ ಕಾರ್ಯಕ್ರಮ ಆಯೋಜಿಸಿದ್ದಾರೆ.

ಈಗಾಗಲೇ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ತಿದ್ದು, ಪ್ರಮೋಷನ್ ಚಟುವಟಿಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇತ್ತೀಚಿಗಷ್ಟೆ ರಾಬರ್ಟ್ ಸಿನಿಮಾದ ಟ್ರೈಲರ್ ಹಾಗೂ ರೊಮ್ಯಾಂಟಿಕ್ ಹಾಡು ರಿಲೀಸ್ ಆಗಿದ್ದು, ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ.

ಹುಬ್ಬಳ್ಳಿಯಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸುವ ಮೂಲಕ ಇದೀಗ ಸಿನಿಮಾ ತಂಡ ಉತ್ತರ ಕರ್ನಾಟಕದ ಅಭಿಮಾನಿಗಳ ಮನಸೆಳೆಯುವ ಪ್ರಯತ್ನ ಮಾಡುತ್ತಿದೆ.