ಅಪ್ಪಟ ಕನ್ನಡಿಗರ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡ್ತಾ ಇರೋ ಅದ್ದೂರಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್’ ಗೆ ನಾಯಕಿಯಾಗಿ ದಕ್ಷಿಣ ಭಾರತದ ಪಾಪ್ಯುಲರ್ ನಟಿ ಶ್ರುತಿ ಹಾಸನ್ ರನ್ನ ಆಯ್ಕೆ ಮಾಡಲಾಗಿದೆ.

ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿ, ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳ್ತಿರೋ ಸಿನಿಮಾದಲ್ಲಿ ಸೂಪರ್ ಸ್ಟಾರ್ ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಸಲಾರ್ ಸಿನಿಮಾದ ಶ್ರುತಿ ಹಾಸನ್ ಲುಕ್ ಕೂಡ ಸಖತ್ ಇಂಟ್ರೆಸ್ಟಿಂಗ್ ಆಗಿದೆ
ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹುಟ್ಟಿದ ದಿನವಾದ ಇಂದು, ಸಲಾರ್ ಸಿನಿಮಾಕ್ಕೆ ನಾಯಕಿಯಾಗಿ ಶ್ರುತಿ ಹಾಸನ್ ಆಯ್ಕೆಯಾಗಿರೋದನ್ನ, ಫಸ್ಟ್ ಲುಕ್ ಪೋಸ್ಟರ್ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದೆ ಸಿನಿಮಾ ಟೀಮ್.
