‘ಪೊಗರು’ ಸಿನಿಮಾ ಫೆಬ್ರವರಿ 19ನೇ ತಾರೀಖು ರಿಲೀಸ್ ಆಗಲಿದೆ ಅಂತ ಸಿನಿಮಾ ಟೀಮ್ ಅನೌನ್ಸ್ ಮೂಡಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಚಿತ್ರ 3 ವರ್ಷದ ನಂತ್ರ ತೆರೆಗೆ ಬರ್ತಿದೆ. ಸಿನಿಮಾದ ಡೈಲಾಗ್ ಗಳು, ಹಾಡುಗಳು ಟೀಸರ್, ಫಸ್ಟ್ ಲುಕ್ ಹಾಗೂ ಧ್ರುವ ಸರ್ಜಾ ಡಿಫರೆಂಟ್ ಗೆಟಪ್ ಸಿಕ್ಕಾಪಟ್ಟೆ ವೈರಲ್ ಆಗಿ ಸಿನಿಮಾ ಬಗ್ಗೆಯೇ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಆಗಿದೆ.

ರ್ಯಾಪರ್ ಚಂದನ್ ಶೆಟ್ಟಿ ಮ್ಯೂಸಿಕ್ ಮಾಡಿ, ಹಾಡಿರೋ ‘ಕರಾಬು ಬಾಸು ಕರಾಬು..’ ಸಾಂಗು ಈಗಾಗ್ಲೇ ಕನ್ನಡಿಗರ ಹಾಟ್ ಫೇವರೆಟ್ ಆಗಿದೆ. ಆದ್ರೆ ಪೊಗರು ಸಿನಿಮಾದ ಉಳಿದ ಸಾಂಗ್ ಗಳು ರಿಲೀಸ್ ಆಗೋದು ಯಾವಾಗ?

ಹಾಡುಗಳೇ ಥಿಯೇಟರ್ ಜನರನ್ನ ಸೆಳೆಯುವ ಇನ್ವಿಟೇಷನ್ ಅಂತ ಹೇಳಲಾಗುತ್ತೆ. ಈಗಾಗಲೇ ಪೊಗರು ಸಿನಿಮಾದ ‘ಕರಾಬು’ ಹಾಡು ಪಾಪ್ಯುಲರ್ ಆಗಿದೆ ಆದರೆ ಉಳಿದ ಹಾಡುಗಳು ರಿಲೀಸ್ ಯಾವಾಗ ಅನ್ನೋದನ್ನಾ ಸಿನಿಮಾಟಿಕ್ ಬಹಿರಂಗಪಡಿಸಿಲ್ಲ.
ಅದ್ದೂರಿಯಾಗಿ ಆಡಿಯೋ ರಿಲೀಸ್ ಫಂಕ್ಷನ್ ಮಾಡದೆ ಹೋದ್ರೂ ಹಾಡುಗಳನ್ನಾದರೂ ರಿಲೀಸ್ ಮಾಡಬಹುದಿತ್ತು. ಅಥವಾ ಆ ಹಾಡುಗಳನ್ನು ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಸರ್ಪ್ರೈಸ್ ಆಗಿ ಸಿನಿಮಾ ಜೊತೆಗೆ ನೀಡಲು ಪಿಚ್ಚರ್ ಟೀಮ್ ಪ್ಲಾನ್ ಮಾಡಿದ್ಯಾ, ಅನ್ನೋದನ್ನ ಸಿನಿಮಾ ಟೀಮ್ ಅಷ್ಟೆ ಕ್ಲಾರಿಟಿ ಕೊಡಬೇಕು.
