ಲಾಕ್ ಡೌನ್ ನಂತ್ರ ಥಿಯೇಟರ್ಗಳು ಓಪನ್ ಆದ್ರೂ, ಸಿನಿಮಾಗಳು ರಿಲೀಸ್ ಆಗದೇ, ಜನರೂ ಥಿಯೇಟರ್ಗೆ ಬರದೇ, ಮೊದಲಿನಂತೆ ಚಿತ್ರರಂಗ ವಿಜೃಂಭಿಸೋಕೆ, ಒಂದೊಳ್ಳೆ ಬ್ರೇಕ್ಗೆ ಕಾಯ್ತಾ ಇದೆ. ಈ ನಡುವೆ ದೊಡ್ಡ ದೊಡ್ಡ ಸಿನಿಮಾಗಳು ಥೀಯೇಟರ್ಗೆ ಬರೋಕೆ ರೆಡಿಯಾಗ್ತಿರೋ ಟೈಮ್ ನಲ್ಲೇ ಒಂದು ಸರ್ಪ್ರೈಸ್ ಅಭಿಮಾನಿಗಳಿಗೆ ಸಿಗ್ತಾ ಇದೆ. ಹೌದು ಇದೇ ಫೆ.05ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಥಿಯೇಟರ್ ನಲ್ಲಿ ಮುಖಾಮುಖಿಯಾಗ್ತಾ ಇದ್ದಾರೆ.
ಡಿಬಾಸ್ ದರ್ಶನ್ ನಟಿಸಿರೋ ರಾಬರ್ಟ್ ಇದೇ ಮಾರ್ಚ್ 11ಕ್ಕೆ ರಿಲೀಸ್ ಆಗ್ತಾ ಇದೆ, ಕಿಚ್ಚ ಸುದೀಪ್ ನಟಿಸಿರೋ ಕೋಟಿಗೊಬ್ಬ-3 ಸಿನಿಮಾದ ರಿಲೀಸ್ ಡೇಟ್ ಇನ್ನೂ ಅಧಿಕೃತವಾಗಿ ಹೊರಬಂದಿಲ್ಲ, ಮತ್ಯಾವ ಸಿನಿಮಾ ಮೂಲಕ ಈ ಇಬ್ಬರು ಕುಚಿಕುಗಳು ಥಿಯೇಟರ್ನಲ್ಲಿ ಮುಖಾ ಮುಖಿಯಾಗ್ತಾಇದ್ದಾರೆ ಅಂದ್ರಾ? ಈ ಇಬ್ಬರು ಸೂಪರ್ ಸ್ಟಾರ್ಗಳಲ್ಲಿರೋ ಒಂದು ಸಾಮ್ಯತೆ ಅಂದ್ರೆ, ಇಬ್ಬರಿಗೂ ತಮ್ಮ ಜೊತೆ ತಮ್ಮವರನ್ನೂ ಬೆಳೆಸಬೇಕು ಅನ್ನೋ ಆಲೋಚನೆ. ಹಾಗಾಗಿ ಈ ಇಬ್ಬರು ಸೂಪರ್ ಸ್ಟಾರ್ಗಳು ತಮ್ಮ ಆಪ್ತರು, ಗೆಳೆಯರ ಸಿನಿಮಾಗಳಲ್ಲಿ ಗೆಸ್ಟ್ ರೋಲ್ಗಳಲ್ಲಿ ಸ್ನೇಹಪೂರ್ವಕವಾಗಿ ಕಾಣಿಸಿಕೊಳ್ತಾರೆ.
ಇದೇ ಫೆ.05ಕ್ಕೆ ತೆರೆಗೆ ಬರಲಿರೋ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗು ಜಾಕಿ ಭಾವನಾ ಅಭಿನಯದ ʻಇನ್ಸಪೆಕ್ಟರ್ ವಿಕ್ರಂʼ. ಈ ಸಿನಿಮಾದಲ್ಲಿ ಡಿಬಾಸ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಖ್ಯಾತ್ ನಿರ್ಮಾಣ ಮಾಡಿ, ನರಸಿಂಹ ಆಕ್ಷನ್ ಕಟ್ ಹೇಳಿರೋ ಆಕ್ಷನ್ ಕಾಮಿಡಿ ಸಿನಿಮಾದಲ್ಲಿ, ದರ್ಶನ್ ದೇಶಭಕ್ತನ ಪಾತ್ರದಲ್ಲಿ ಮಿಂಚಿದ್ದಾರೆ.
ಅವತ್ತೇ ತೆರೆಗೆ ಬರ್ತಿರೋ ಚಂದನ್ ಆಚಾರ್, ಲಾಸ್ಯ ನಾಗರಾಜ್ ನಟಿಸಿರೋ ʻಮಂಗಳವಾರ ರಜಾದಿನʼ ಸಿನಿಮಾದಲ್ಲಿ ನಾಯಕ ನಟ ಚಂದನ್ ಆಚಾರ್, ಕಿಚ್ಚ ಸುದೀಪ್ರ ಪಕ್ಕಾ ಅಭಿಮಾನಿ. ಸುದೀಪ್ಗೆ ತನ್ನ ಕೈಯಾರೆ ಹೇರ್ ಸ್ಟೈಲ್ ಮಾಡ್ಬೇಕು ಅನ್ನೋದು ಚಿತ್ರದ ನಾಯಕನ ಕನಸು. ಈ ಕನಸು ಈಡೇರಿಸೋಕೆ ಸುದೀಪ್ ಹೇಗೆ ಸಹಕರಿಸ್ತಾರೆ ಅನ್ನೋದು ಸಿನಿಮಾದ ಕಥೆ. ಯುವಿನ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ 2 ಸಿನಿಮಾಗಳ ಮೂಲಕ ದರ್ಶನ್ ಹಾಗೂ ಸುದೀಪ್ ಫೆ.05ರಂದು ತೆರೆಗೆ ಬರ್ತಾ ಇದ್ದಾರೆ.