ಹಳೆ ಕೌರವೇಶ್ವರನ ಮೀಟ್ ಮಾಡಿದ ಹೊಸ ಕೌರವೇಶ್ವರಾ.. ಹೌದು ಈ ಹಿಂದೆ ಕೌರವ ಸಿನಿಮಾದಲ್ಲಿ ಕೌರವನ ಪಾತ್ರ ಮಾಡಿದಂತಹ ನಟ ಹಾಗೂ ಮಂತ್ರಿ ಬಿ ಸಿ ಪಾಟೀಲ್, ಕುರುಕ್ಷೇತ್ರ ಸಿನಿಮಾದಲ್ಲಿ ಇತ್ತೀಚೆಗೆ ಕೌರವೇಶ್ವರ ಅರ್ಥಾತ್ ದುರ್ಯೋಧನನ ಪಾತ್ರದಲ್ಲಿ ಮಿಂಚಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ಅವರ ತೋಟದ ಮನೆಯಲ್ಲಿ ಭೇಟಿ ಮಾಡಿದ್ರು.
ಇಬ್ಬರು ದಿಗ್ಗಜರು ತಮ್ಮ ಸಿನಿ ಬದುಕಿನ ಬಗ್ಗೆ ಹಾಗೂ ಪ್ರಸ್ತುತ ರಾಜಕೀಯ ಸನ್ನಿವೇಶಗಳ ಬಗ್ಗೆ ಮಾತನಾಡಿ, ನಂತರ ಬಿಸಿ ಪಾಟೀಲ್ ದರ್ಶನ್ ನೀಡಿದ ಆತಿಥ್ಯವನ್ನು ಸ್ವೀಕರಿಸಿ, ದರ್ಶನ್ ರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಕೃಷಿ ಮಂತ್ರಿಗಳು ಆಗಿರುವ ಬಿ ಸಿ ಪಾಟೀಲ್ ರೈತ ದರ್ಶನ್ ಹಾಗೂ ಅವರ ತೋಟವನ್ನು ಮೆಚ್ಚಿ ಕೊಂಡಾಡಿದ್ರು. ಇದೊಂದು ಸ್ನೇಹ ಪೂರ್ವಕ ಭೇಟಿಯಾಗಿತ್ತು
ಅಂತ ಬಿ ಸಿ ಪಾಟೀಲ್ ತಿಳಿಸಿದ್ದಾರೆ.