ಕಿಚ್ಚ ಸುದೀಪ ಅಭಿನಯದ ಬಹುನಿರೀಕ್ಷಿತ ‘ಫ್ಯಾಂಟಮ್’ ಸಿನಿಮಾದ ಟೈಟಲ್ ಬದಲಾಗಿದೆ. ಜ.21ರಂದು ಚಿತ್ರತಂಡ ಒಂದು ಮೇಜರ್ ಅನೌನ್ಸ್ ಮೆಂಟ್ ಮಾಡುವುದಾಗಿ ಹೇಳಿಕೊಂಡಿತ್ತು. ಅದರಂತೆ ತಮ್ಮ ಸಿನಿಮಾ ಟೈಟಲ್ ‘ಫ್ಯಾಂಟಮ್’ ಬದಲಾಗಿ,ಈಗ ಚಿತ್ರದಲ್ಲಿ ಸುದೀಪ್ ಪಾತ್ರ ‘ವಿಕ್ರಾಂತ್ ರೋಣ‘ ಹೆಸರನ್ನೇ ಸಿನಿಮಾದ ಟೈಟಲ್ ಮಾಡಲು ಸಿನಿಮಾ ಟೀಮ್ ನಿರ್ಧರಿಸಿದೆ.
‘ವಿಕ್ರಾಂತ್ ರೋಣ’ ಆಗಿ ಬದಲಾಗಿರುವ ಟೈಟಲ್ ಆನ್ನು ದೊಡ್ಡಮಟ್ಟದಲ್ಲಿ ಅನೌನ್ಸ್ ಮಾಡುವುದಕ್ಕೆ ಟೀಮ್ ರೆಡಿಯಾಗಿದೆ. ಇದೇ ಜನವರಿ 31ರಂದು ದುಬೈನ ಬುರ್ಜ್ ಖಲೀಫಾದಲ್ಲಿ ‘ವಿಕ್ರಾಂತ್ ರೋಣ’ ಟೈಟಲ್ ಅದ್ಧೂರಿಯಾಗಿ ಲಾಂಚ್ ಆಗಲಿದೆ. ಇದು ಜಗತ್ತಿನ ಅತೀ ಎತ್ತರದ ಕಟ್ಟಡ. ಈ ಕಟ್ಟಡದಲ್ಲಿ ಟೈಟಲ್ ಲಾಂಚ್ ಮಾಡಿಕೊಳ್ಳಲಿರುವ ಕನ್ನಡದ ಮೊದಲ ಸಿನಿಮಾ ‘ವಿಕ್ರಾಂತ್ ರೋಣ’ ಆಗಲಿದೆ. ಟೈಟಲ್ ಲಾಂಚ್ ಜೊತೆಗೆ ಅಂದೇ ಚಿತ್ರದ 3 ನಿಮಿಷ ಒಂದು ಸ್ನೀಕ್ ಪೀಕ್ ವಿಡಿಯೋವನ್ನು ಸಹ ರಿಲೀಸ್ ಮಾಡುವುದಕ್ಕೆ ತಂಡ ಪ್ಲ್ಯಾನ್ ಮಾಡಿಕೊಂಡಿದೆ.