ಕರೋನಾ ಲಾಕ್ ಡೌನ್ ಬಳಿಕ ಈಗ ಸ್ಯಾಂಡಲ್ ವುಡ್ ಮತ್ತೆ ಮೊದಲಿನಂತೆ ರಾರಾಜಿಸಲು ಸಜ್ಜಾಗ್ತಾ ಇದೆ. ಒಂದೊಂದೇ ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಳ್ತಿವೆ. ಜೊತೆಗೆ ರಿಲೀಸ್ ಗೆ ರೆಡಿಯಾಗ್ತಿವೆ. ಸದ್ಯ ಕರ್ನಾಟಕದಲ್ಲಿ ಇನ್ನೂ ಥಿಯೇಟರ್ ಗಳಲ್ಲಿ ಶೇಕಡಾ 100ರಷ್ಟು ಪ್ರೇಕ್ಷಕರಿಗೆ ಅನುಮತಿ ಸಿಕ್ಕಿಲ್ಲ. ಆದರೇ ಸದ್ಯದಲ್ಲೇ ಅದಕ್ಕೆ ಅನುಮತಿ ಸಿಗುವ ಭರವಸೆಯೊಂದಿಗೆ, ಕನ್ನಡದ ಬಿಗ್ ಸ್ಟಾರ್ ಸಿನಿಮಾಗಳು ಥಿಯೇಟರ್ ಗೆ ಬರೋಕೆ ರೆಡಿಯಾಗಿವೆ.

ಫೆಬ್ರವರಿ 19ಕ್ಕೆ ರಥ ಸಪ್ತಮಿಯ ದಿನ, ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಸಿನಿಮಾ ರಿಲೀಸ್ ಆಗ್ತಾ ಇದೆ. ಪೊಗರು ಸಿನಿಮಾ ರಿಲೀಸ್ ಆದ ನಂತರ ಮಾರ್ಚ್ 11ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ರಾಬರ್ಟ್ ತೆರೆಗೆ ಬರ್ತಿದೆ. ರಾಬರ್ಟ್ ಸಿನಿಮಾದ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಏಪ್ರಿಲ್ 1ಕ್ಕೆ ರಿಲೀಸ್ ಆಗ್ತಿದೆ.ಯುವರತ್ನ ಸಿನಿಮಾದ ಬಳಿಕ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಹಿಟ್ ಸಿನಿಮಾಗಳು ರಿಲೀಸ್ ಆಗುವುದಕ್ಕೆ ರೆಡಿಯಾಗ್ತಿವೆ.

ಫೆ.19-ಪೊಗರು, ಮಾ.11 -ರಾಬರ್ಟ್, ಏ.1 -ಯುವರತ್ನ, ಏ. -ಕೋಟಿಗೊಬ್ಬ-3. ಈ ಎಲ್ಲಾ ಸಿನಿಮಾ ರಿಲೀಸ್ ಡೇಟ್ ಗಳನ್ನ ನೋಡಿದಾಗ ಪ್ರತಿ ಸಿನಿಮಾದ ರಿಲೀಸ್ ನಡುವೆ 20 ದಿನದ ಅಂತರ ಇದೆ. ಈ ಎಲ್ಲಾ ಸಿನಿಮಾಗಳ ಬಹುಕೋಟಿ ಬಂಡವಾಳದ ಸಿನಿಮಾಗಳು ಆಗಿರೋ ಕಾರಣ ಪ್ರತಿ ಸಿನಿಮಾಗಳ ನಡುವೆ 3 ವಾರಗಳ ಅಂತರದ ಫಾರ್ಮುಲ ಅಳವಡಿಸಿಕೊಂಡಿದ್ದಾರೆ ನಿರ್ಮಾಪಕರು.

ಸದ್ಯ ಎಲ್ಲ ರಂಗಗಳು ಚೇತರಿಸಿಕೊಂಡಿದ್ರೂ, ಸಿನಿಮಾರಂಗ ಮಾತ್ರ ಇನ್ನೂ ಚೇತರಿಸಿಕೊಂಡಿಲ್ಲ. ಅದರಲ್ಲೂ ಕನ್ನಡ ಚಿತ್ರರಂಗ ಇನ್ನಷ್ಟು ಚೈತನ್ಯ ಪಡೆಯಬೇಕಿದೆ. ಕರೋನ ನಂತರ ಈಗ ಸಿನಿಮಾಗಳು ರಿಲೀಸ್ ಆಗ್ತಿರುವುದು ಹೊಸ ಭರವಸೆ ಮೂಡಿಸಿದೆ.
