ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ, ನಂದ ಕಿಶೋರ್ ನಿರ್ದೇಶನದ ಬಹುನಿರೀಕ್ಷಿತ ಪೊಗರು ಸಿನಿಮಾ ಫೆಬ್ರವರಿ 19ಕ್ಕೆ ವಿಶ್ವದಾದ್ಯಂತ ಚೇತರಿಕೆ ಕಾಣ್ತಿದೆ. ಕನ್ನಡ ತಮಿಳು, ತೆಲುಗಿನಲ್ಲಿ ಏಕಕಾಲಕ್ಕೆ ಪೊಗರು ಸಿನಿಮಾ ರಿಲೀಸ್ ಆಗ್ತಿದೆ. ಬಿ ಕೆ ಗಂಗಾಧರ್ ನಿರ್ಮಾಣದ ಸಿನಿಮಾ ಪೊಗರು. ಈ ಮೂಲಕ ಕನ್ನಡದಲ್ಲಿ ಕರೋನಾ ಲಾಕ್ ಡೌನ್ ನಂತ್ರ ರಿಲೀಸ್ ಆಗ್ತಿರೋ ಮೊದಲ ಬಿಗ್ ಬಜೆಟ್, ಬಿಗ್ ಸ್ಟಾರ್ ಹಾಗೂ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಪೊಗರು ಆಗಲಿದೆ.

ಧ್ರುವ ಸರ್ಜಾ ಜೊತೆಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಡಾಲಿ ಧನಂಜಯ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಈಗಾಗಲೇ ಸಿನಿಮಾದ ಹಾಡುಗಳು ಹಾಗೂ ಟೀಸರ್ ಟ್ರೆಂಡಿಂಗ್ ನಲ್ಲಿದೆ. ಸಿನಿಮಾದ ಖರಾಬು ಸಾಂಗು ದೇಶಾದ್ಯಂತ ಪಾಪ್ಯುಲರ್ ಆಗಿದೆ.