ಸ್ಯಾಂಡಲ್‌ವುಡ್‌ನ ತ್ರಿಮೂರ್ತಿ ಸೂಪರ್ ಸ್ಟಾರ್ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರನ್ನ ಕರೆಯೋದಕ್ಕೆ ಯಾವುದೇ ಅಡೆ ತಡೆ ಇಲ್ಲ. ಈ ಮೂವರು ಒಟ್ಟಾಗಿ ನಿಂತ್ರೆ, ಮತ್ತೊಮ್ಮೆ ಕನ್ನಡ ಸಿನಿಮಾ ಇಂಡಸ್ಟ್ರಿ ದೇಶದಾದ್ಯಂತ ತನ್ನ ಸಾರ್ವಭೌಮತ್ವ ಸ್ಥಾಪಿಸೋದ್ರಲ್ಲಿ ಡೌಟೇ ಇಲ್ಲ. ಟಾಪ್ ಸ್ಟಾರ್ ಗಳು ಒಬ್ಬರನ್ನೊಬ್ಬರು ಕಂಡ್ರೆ ದ್ವೇಷ ಮಾಡ್ತಾರೆ ಅನ್ನೋದನ್ನ ಸುಳ್ಳು ಮಾಡಿದ ಹಲವು ಪ್ರಸಂಗಗಳಿವೆ, ಹಲವಾರು ಕಾರಣಗಳಿಂದ ಸ್ಟಾರ್‌ಗಳ ನಡುವೆ ವೈಮನಸ್ಸು ಬಂದಾಗಲೂ ಚಿತ್ರರಂಗದ ಹಿರಿಯರು ಭಿನ್ನಾಭಿಪ್ರಾಯ ದೂರ ಮಾಡಿ, ಈ ಸ್ಟಾರ್‌ಗಳನ್ನ ಒಂದು ಮಾಡಿದ್ದು ಇದೆ.

ಸ್ಟಾರ್‌ಗಳನ್ನ ಒಂದು ಗೂಡಿಸೋ ಕಾರ್ಯದಲ್ಲಿ ಸಾಕಷ್ಟು ಯಶಸ್ಸು ಕಂಡವರು ರೆಬೆಲ್ ಸ್ಟಾರ್ ಅಂಬರೀಶ್, ರೆಬೆಲ್ ಸ್ಟಾರ್ ಕೊನೆಗೂ ಒಂದು ಮಾಡಲು ಆಗದೇ ಹೋದ ಸ್ಟಾರ್ ತ್ರಯರನ್ನ ಅವ್ರ ಮಡದಿ ಸುಮಲತಾ ಒಂದು ಮಾಡ್ತಾರೆ ಅನ್ನೋ ಭರವಸೆ ಈಗ ಮೂಡ್ತಾ ಇದೆ. ದರ್ಶನ್, ಸುದೀಪ್, ಯಶ್ ಎಲ್ಲರಿಗೂ ಅಂಬಿ ಅಂದ್ರೆ ಹಲವು ಪ್ರತ್ಯೇಕ ಕಾರಣಗಳಿಗೆ ಗಾಡ್ ಫಾದರ್ ಇದ್ದಂತೆ, ಸುದೀಪ್ ಹಾಗೂ ದರ್ಶನ್ ನಡುವೆ ಕೆಲವು ಕಾರಣಕ್ಕೆ ವೈಮನಸ್ಸು ಮೂಡಿದಾಗ ಅಂಬಿ ಸರಿ ಮಾಡುವ ಪ್ರಯತ್ನ ಮಾಡಿದ್ರು, ಅದು ಸಫಲವಾಗಿರ್ಲಿಲ್ಲ.

ಸುಮಲತಾ ಮಂಡ್ಯ ಎಲೆಕ್ಷನ್ ನಿಂದಾಗಿ ದರ್ಶನ್ ಹಾಗೂ ಯಶ್ ನಡುವೆ ಒಂದು ಅಪರೂಪದ ಬಾಂಧವ್ಯ ಬೆಸೆದಿತ್ತು, ಸುದೀಪ್ ಹಾಗೂ ಯಶ್ ಕೂಡ ಉತ್ತಮ ಬಾಂಧವ್ಯ ಇದೆ ಅಂತ ಇತ್ತೀಚಿನ ನಟ ರಮೇಶ್ ಅರವಿಂದ್ ಅವ್ರ ಮಗಳ ಮದುವೆ ಫೋಟೋಗಳು ಹೇಳ್ತಿವೆ, ಇಲ್ಲೂ ಇಬ್ಬರನ್ನು ಒಂದೇ ಫ್ರೇಮ್‌ಗೆ ತಂದಿರೋದು ಸುಮಲತಾ ಅಂಬರೀಶ್, ಇದೇ ಪ್ರಯತ್ನ ಮುಂದುವರೆಸಿ ಜೋಡೆತ್ತುಗಳ ಜೊತೆಗೆ ಸುದೀಪ್ ಅನ್ನೋ ಕಿಚ್ಚನ್ನು ಸೇರಿಸಿ, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಗಜ ಬಲ ನೀಡಲು ಸುಮಲತಾ ಪ್ರಯತ್ನ ನಡೆಸ್ತಾ ಇದ್ದಾರೆ ಅನ್ನೋದು ಇಂಡಸ್ಟ್ರಿಯ ಕೆಲವರ ಮಾತು, ಎಷ್ಟೆ ಆಗ್ಲಿ ಸ್ನೇಹಜೀವಿಯ ಅರ್ಧಾಂಗಿ ಅಲ್ವಾ?