ಸಂಕ್ರಾಂತಿ ಸಂಭ್ರಮದಲ್ಲೇ ಇವತ್ತು ಬೆಳಂಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ, ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ, ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅಭಿನಯದ 2ನೇ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ಮುಹೂರ್ತ ಸರಳವಾಗಿ ನಡೀತು. ದುನಿಯಾ ಸೂರಿ ನಿರ್ದೇಶನದ ಸಿನಿಮಾಕ್ಕೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ನಿರ್ಮಾಪಕ ಸುಧೀರ್ ಬಂಡವಾಳ ಹೂಡುತಿದ್ದಾರೆ. ಬ್ಯಾಡ್ ಮ್ಯಾನರ್ಸ್ ಸಿನಿಮಾದ ಮೊದಲ ದೃಶ್ಯಕ್ಕೆ ನಟಿ, ಸಂಸದೆ ಸುಮಲತಾ ಅಂಬರೀಷ್ ಕ್ಲಾಪ್ ಮಾಡಿ, ಮಗನ ಸಿನಿಮಾಕ್ಕೆ ಶುಭಕೋರಿದ್ರು. ಮೂಹೂರ್ತದೊಂದಿಗೆ ಇವತ್ತಿನಿಂದಲೇ ಸಿನಿಮಾದ ಶೂಟಿಂಗ್ ಭರದಿಂದ ಸಾಗಲಿದೆ.
ಮೂಹೂರ್ತ ಕಾರ್ಯಕ್ರಮಕ್ಕೆ ಟಗರು, ಸಲಗ ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್, ನಿರ್ಮಾಪಕ ಸುಧೀರ್, ನೀರ್ ದೋಸೆ, ಸಿದ್ಲಿಂಗು ನಿರ್ದೇಶಕ ವಿಜಯ್ ಪ್ರಸಾದ್ ಭೇಟಿ ನೀಡಿ ಸಿನಿಮಾಕ್ಕೆ ಶುಭ ಕೋರಿದ್ರು. ‘ಬ್ಯಾಡ್ ಮ್ಯಾನರ್ಸ್’ ಸಿನಿಮಾಕ್ಕೆ ಟಗರು ಖ್ಯಾತಿಯ ಚರಣ್ ರಾಜ್ ಮ್ಯೂಸಿಕ್ ಮಾಡ್ತಿದ್ದಾರೆ. ಟಗರು ಮೂಲಕ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಮಾಸ್ತಿ ಈ ಸಿನಿಮಾಕ್ಕೂ ಡೈಲಾಗ್ಸ್ ಬರೀತಾ ಇದ್ದಾರೆ.ಪಾಪ್ ಕಾರ್ನ್ ಮಂಕಿ ಟೈಗರ್ ನ ಕ್ಯಾಮರಾಮನ್ ಶೇಖರ್ ಈ ಸಿನಿಮಾಕ್ಕೆ ಡಿಂಪಿ. ಇಂದಿನಿಂದಲೇ ಮಂಡ್ಯದಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಿದೆ.