ಸಂಕ್ರಾಂತಿ ಹಬ್ಬ ಅಂದ್ರೆ ಅದು ಹಳ್ಳಿ ಹಬ್ಬ, ಅದ್ರಲ್ಲೂ ರೈತಾಪಿ ವರ್ಗ ಹೆಚ್ಚು ಸಂಭ್ರಮಿಸೋ ಹಬ್ಬ. ಪ್ರತಿ ವರ್ಷದಂತೆ ಈ ವರ್ಷವೂ ಸಂಕ್ರಾಂತಿ ರಂಗು ಹಳ್ಳಿಗಳಲ್ಲಿ ಕಳೆಕಟ್ಟಿತ್ತು. ಅದೇ ಥರಾ ಡಿಬಾಸ್ ದರ್ಶನ್ ಫಾರ್ಮ್ ಹೌಸ್ ನಲ್ಲೂ. ಪ್ರತಿಬಾರಿಯಂತೆ ಈ ಬಾರಿಯೂ ದರ್ಶನ್ ತಮ್ಮ ತೋಟದ ರಾಸುಗಳಿಗೆ, ತಮ್ಮ ನೆಚ್ಚಿನ ಕುದುರೆಗೆ ಸಿಂಗರಿಸಿ, ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನ ಪಕ್ಕ ಗ್ರಾಮೀಣ ಶೈಲಿಯಲ್ಲಿ ಆಚರಿಸಿ, ಸ್ನೇಹಿತರೊಂದಿಗೆ ಖುಷಿ ಪಟ್ಟರು.