ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪೊಗರು’ ಸಿನಿಮಾ ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು. ಆದ್ರೆ ಕೊರೊನಾ ಕಾರಣ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು. ಚಿತ್ರಮಂದಿರಗಳು ಪುನಾರಂಭ ಆದಾಗ ರಿಲೀಸ್ ಆಗುವ ಕನ್ನಡದ ಹೈ ಬಜೆಟ್ ಸಿನಿಮಾಗಳ ಪೈಕಿ ‘ಪೊಗರು’ ಮೊದಲನೇ ಸಿನಿಮಾ ಆಗುತ್ತೆ ಅನ್ನೋ ನಿರೀಕ್ಷೆಗಳಿದ್ವು. ಆದರೆ ಸದ್ಯಕ್ಕೆ ಪೊಗರು ರಿಲೀಸ್ ಸದ್ಯಕ್ಕೆ ಇಲ್ಲ ಅನ್ನೋ ಮಾಹಿತಿ ಇದೆ.

ಜನವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ‘ಪೊಗರು’ ರಿಲೀಸ್ ಆಗಬಹುದು ಎಂದು ಕೆಲವೇ ದಿನಗಳ ಹಿಂದೆ ಗುಸುಗುಸು ಕೇಳಿಬಂದಿತ್ತು. ಆದರೆ ಆ ಬಗ್ಗೆ ನಿರ್ದೇಶಕ ನಂದಕಿಶೋರ್ ಸೇರಿದಂತೆ ಚಿತ್ರತಂಡದ ಯಾರೊಬ್ಬರೂ ಅಧಿಕೃತವಾಗಿ ಹೇಳ್ತಿಲ್ಲ. ಈಗ ಜನವರಿ ಎರಡನೇ ವಾರ ಕಳೆದಿದೆ. ಹಾಗಿದ್ದರೂ ‘ಪೊಗರು’ ಬಳಗದಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಹಾಗಾಗಿ ಚಿತ್ರದ ಬಿಡುಗಡೆ ಇನ್ನಷ್ಟು ತಡವಾಗಲಿದೆ.

ಲಾಕ್‌ಡೌನ್ ಸಡಿಲಿಕೆ ಬಳಿಕ ತೆರೆಕಾಣಲು ಕನ್ನಡದಲ್ಲಿ ಅನೇಕ ಬಿಗ್ ಬಜೆಟ್ ಸಿನಿಮಾಗಳು ಕಾದು ಕುಳಿತಿವೆ. ದರ್ಶನ್ ನಟನೆಯ ‘ರಾಬರ್ಟ್’ ಚಿತ್ರ ಮಾರ್ಚ್ 11ರಂದು ಶಿವರಾತ್ರಿ ಹಬ್ಬದ ಪ್ರಯುಕ್ತ ತೆರೆಕಾಣುವುದಾಗಿ ಘೋಷಿಸಿಕೊಂಡಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಯುವರತ್ನ’ ಚಿತ್ರ ಏಪ್ರಿಲ್ 1ರಂದು ರಿಲೀಸ್ ಆಗುವುದು ಖಚಿತ ಆಗಿದೆ. ಹಾಗಾಗಿ ಪೊಗರು ಸಿನಿಮಾ ಮೇ ನಲ್ಲಿ ತೆರೆಕಾಣುವುದು ಬಹುತೇಕ ಕನ್ ಫರ್ಮ್ ಆಗಿದೆ.