ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಅಯೋಗ್ಯ ನಿರ್ದೇಶಕ ಮಹೇಶ್ ಕುಮಾರ್ ಕಾಂಬಿನೇಷನ್ನಲ್ಲಿ ರೆಡಿಯಾಗ್ತಿರೋ ಮದಗಜ ಚಿತ್ರದ ಕನ್ನಡ ಟೀಸರ್ ಶ್ರೀಮುರುಳಿ ಬರ್ತ್ಡೇಗೆ ರಿಲೀಸ್ ಆಗಿ, ಒಳ್ಳೆ ರೆಸ್ಪಾನ್ಸ್ ಪಡೀತು, ನಂತ್ರ ಹೊಸ ವರ್ಷದ ದಿನ ತೆಲುಗಿನಲ್ಲಿ ಫಸ್ಟ್ ಲುಕ್ ಟೀಸರ್ ಸಹ ರಿಲೀಸ್ ಮಾಡಿದ ಚಿತ್ರತಂಡ, ಅಲ್ಲೂ ಕೂಡ ಪ್ರಶಂಸೆ ಪಡೆದುಕೊಂಡಿತ್ತು, ಈಗ ತಮಿಳಿನಲ್ಲಿ `ಮದಯಾನೈ’ ಆಗಿ ಬರ್ತಿರೋ ಸಿನಿಮಾದ ಟೀಸರ್ ಇದೇ ತಿಂಗಳು 18ಕ್ಕೆ ರಿಲೀಸ್ ಆಗಲಿದೆ.
ಕನ್ನಡ, ತೆಲುಗು ನಂತರ ‘ಮದಗಜ’ ಚಿತ್ರವನ್ನು ತಮಿಳಿನಲ್ಲೂ ತೆರೆಗೆ ತರುವುದಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಧಾರಿಸಿದ್ದಾರೆ. ಕನ್ನಡದಂತೆ, ತೆಲುಗಿನಲ್ಲೂ ಮದಗಜ ಟೀಸರ್ಗೆ ನಟ ಶ್ರೀಮುರುಳಿ ಡಬ್ ಮಾಡಿದ್ರು, ಈಗ ತಮಿಳಿನಲ್ಲೂ ಅವ್ರೇ ಡಬ್ ಮಾಡಲಿರೋದು ವಿಶೇಷ. ಸಂಕ್ರಾಂತಿ ಹಬ್ಬದ ದಿನ ಮದಗಜ ಸಿನಿಮಾದ ತಮಿಳು ಟೈಟಲ್ ಮದಯಾನೈ ರಿಲೀಸ್ ಮಾಡಿದೆ ಸಿನಿಮಾ ಟೀಮ್

ನಟ ಶ್ರೀಮುರಳಿ ವಾರಾಣಸಿ ಗ್ಯಾಂಗ್ಸ್ಟರ್ ಆಗಿ ಚಿತ್ರದಲ್ಲಿಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಬ್ಬುಲಿ, ರಾಬರ್ಟ್ ಸಿನಿಮಾಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮದಗಜ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀಮುರಳಿಗೆ ನಾಯಕಿಯಾಗಿ ಮೊದಲ ಬಾರಿಗೆ ಆಶಿಕಾ ರಂಗನಾಥ್ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಜಗಪತಿ ಬಾಬು ಬಣ್ಣ ಹಚ್ಚಿದ್ದಾರೆ. ಉಳಿದಂತೆ, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ‘ಮದಗಜ’ ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಹಾಡುಗಳಿಗೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ.
