ಜೋಗಿ ಪ್ರೇಮ್ ನಿರ್ದೇಶನದಲ್ಲಿ ತಯಾರಾಗ್ತಿರೋ ಮ್ಯೂಸಿಕಲ್ ವಿಶ್ಯುಯಲ್ ಟ್ರೀಟ್ ‘ಏಕ್ ಲವ್ ಯಾ’ 4 ಭಾಷೆಗಳಲ್ಲಿ ತೆರೆಗೆ ಬರ್ತಾ ಇದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಲಿರೋ ಸಿನಿಮಾದ ಮೊದಲ ಹಾಡು ಪ್ರೇಮಿಗಳ ದಿನದಂದು ಫೆ.14ರಂದು ರಿಲೀಸ್ ಆಗ್ತಾ ಇದೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಈ ಕುರಿತು ಇನ್ಫಮೇಶನ್ ಶೇರ್ ಮಾಡಿದೆ ಏಕ್ ಲವ್ ಯಾ ಪಿಚ್ಚರ್ ಟೀಮ್.

ಪ್ರೇಮ್ ಸಿನಿಮಾ ಅಂದ ತಕ್ಷಣ ಪ್ರೇಕ್ಷಕರು ಚಿತ್ರದ ಹಾಡುಗಳ ಬಗ್ಗೆ ತುಂಬಾನೇ ನಿರೀಕ್ಷೆಗಳನ್ನ ಇಟ್ಕೊಂಡಿರ್ತಾರೆ. ಪ್ರೇಮ್ ಕೂಡ ತಮ್ಮ ಅಭಿಮಾನಿಗಳ ನಿರೀಕ್ಷೆಯನ್ನ ಹುಸಿ ಮಾಡದೇ ಸೂಪರ್ ಹಿಟ್ ಹಾಡುಗಳನ್ನ ನೀಡಿದ್ದಾರೆ. ಪ್ರೇಮ್ರ ಈ ಮ್ಯೂಸಿಕಲ್ ಮ್ಯಾಜಿಕ್ ಈಗ ನಾಲ್ಕು ಭಾಷೆಗಳಲ್ಲೂ ಮೋಡಿ ಮಾಡಲಿದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಇರೋ ಹಾಡು ಪ್ರೇಮಿಗಳ ದಿನದಂದು ರಿಲೀಸ್ ಆಗಲಿದೆ.
ಈ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕ ಪ್ರೇಮ್ರ ಸಿನಿಮಾ ಒಂದು 4 ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗ್ತಿದೆ. ಪ್ರೇಮ್ ಪತ್ನಿ ನಟಿ ರಕ್ಷಿತಾ ಪ್ರೇಮ್, ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ನಲ್ಲಿ ರೆಡಿಯಾಗ್ತಿರೋ ಸಿನಿಮಾ, ಅದ್ರ ಸಬ್ ಟೈಟಲ್ಲೇ ಹೇಳುವಂತೆ ಪ್ರೀತಿ ಬಯಸೋ ಎಲ್ಲವನ್ನ ಪ್ರೇಕ್ಷಕನಿಗೆ ನೀಡಲಿದೆ. ಏಕ್ ಲವ್ ಯಾ, ಈ ವರ್ಷದ ಮ್ಯೂಸಿಕಲ್ ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ.