18.9 C
Bengaluru
Tuesday, February 7, 2023
spot_img

ರಾಕಿ ಭಾಯ್‌ ಬರ್ತ್‌ಡೇಗೆ ಅಭಿಮಾನಿಗಳ ಗಿಫ್ಟ್‌..!

ರಾಕಿಂಗ್‌ ಸ್ಟಾರ್‌ ಯಶ್‌ ಕರೋನಾ ಇರುವ ಕಾರಣ ಇದೇ ಜನವರಿ ೮ರಂದು ತಮ್ಮ ಹುಟ್ಟುಹಬ್ಬವನ್ನ ಆಚರಿಸಕೊಳ್ಳೋದಿಲ್ಲ ಅಂತ ಹೇಳಿದ್ರು, ಅಭಿಮಾನಿಗಳಿಗೆ ಸೋಷಿಯಲ್‌ ಮೀಡಿಯದಲ್ಲಿ ವಿಶ್‌ ಮಾಡುವುದಾಗಿ ತಿಳಿಸಿದ್ರು, ಅವತ್ತು ಬೆಳಗ್ಗೆ ತಮ್ಮ ಬಹುನಿರೀಕ್ಷಿತ ಕೆಜಿಎಫ್‌ ಚಾಪ್ಟರ್‌-೨ ಪಿಚ್ಚರ್‌ನ ಟೀಸರ್‌ ರಿಲೀಸ್‌ ಮಾಡುವುದಾಗಿ ತಿಳಿಸಿದ್ರು. ಟೀಸರ್‌ ನೋಡಲು ಕಾತುರರಾಗಿದ್ರು, ಈ ಟೀಸರ್ ಅನ್ನು ದೊಡ್ಡ ಪರೆದೆ ಮೇಲೆ ನೋಡುವ ಉತ್ಸಾಹದಲ್ಲಿ ಈಗ ರಾಕಿ ಭಾಯ್‌ ಅಭೀಮಾನಿಗಳು ಒಂದು ಸರಳ ಕಾರ್ಯಕ್ರಮವನ್ನ ಆಯೋಜಿಸಿದ್ದಾರೆ.

ಗೌಡನಕೆರೆ ಶ್ರೀನಿವಾಸ ಥಿಯೇಟರ್‌ನಲ್ಲಿ ರಾಕಿ ಭಾಯ್‌ ಹುಟ್ಟುಹಬ್ಬದ ದಿನ ಬೆಳಗ್ಗೆ ೧೦ಕ್ಕೆ ಕೆಜಿಎಫ್‌-೨ ಟೀಸರ್‌ ಬಿಡುಗಡೆ ಮಾಡಿ, ಸಿಹಿ ಹಂಚಲಿದ್ದಾರೆ, ಜೊತೆಗೆ ಅಭಿಮಾನಿಗಳಿಗೆ ಉಪಹಾರವನ್ನೂ ನೀಡುವ ಪ್ಲಾನ್‌ ಮಾಡಿಕೊಂಡಿದ್ದಾರೆ. ಜೊತೆಗೆ ಯಶ್‌ ಅವ್ರ ಭಾವಚಿತ್ರವಿರುವ ೨೦೨೧ರ ವಿನೂತನ ಕ್ಯಾಲೆಂಡರ್‌ ಅನ್ನು ಹಂಚಿಕೆ ಮಾಡಲಿದ್ದಾರೆ. ಅಖಿಲ ಕರ್ನಾಟಕ ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿ ಸಂಘ ಹಾಗೂ ಅಖಿಲ ಕರ್ನಾಟಕ ರಾಕಿಂಗ್‌ ಸ್ಟಾರ್‌ ಯಶ್‌ ಯುವ ಅಭಿಮಾನಿ ಸಂಘ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿವೆ. ಕಾರ್ಯಕ್ರಮದಲ್ಲಿ ಕೆಜಿಎಫ್‌ ಪಿಚ್ಚರ್‌ ನ ಸಹಕಲಾವಿದರು ಸಹ ಭಾಗವಹಿಸಲಿದ್ದಾರೆ.

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles