News

ಸ್ಯಾಂಡಲ್ ವುಡ್ ನಲ್ಲಿ ವರ್ಷಾಂತ್ಯಕ್ಕೆ ಗೆದ್ದ ಟಾಪ್ 10 ಸಿನಿಮಾಗಳು!

ಸ್ಯಾಂಡಲ್ ವುಡ್ ನಲ್ಲಿ ವರ್ಷಾಂತ್ಯಕ್ಕೆ ಗೆದ್ದ ಟಾಪ್ 10 ಸಿನಿಮಾಗಳು!
  • PublishedDecember 20, 2021

2020 ರಲ್ಲಿ ಕಾಣಿಸಿಕೊಂಡ ಕೊರೊನಾ ಎಂಬ ವೈರಾಣು ಎಲ್ಲವನ್ನು ಸ್ತಬ್ದ ಮಾಡಿಬಿಟಿತ್ತು,ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಬಿದ್ದ ಹೊಡೆತದಿಂದ ಚೇತರಿಸಿಕೊಳ್ಳಲು ಸಾದ್ಯವಾಗಲು ಸಾಕಷ್ಟು ಸಮಯವೇ ಬೇಕಾಯ್ತು, ಮೊನ್ನೆ ಮೊನ್ನೆಯಷ್ಟೆ ಸ್ವಲ್ಪ ಸ್ವಲ್ಪವೇ ನಿರಾಳವಾಗುತ್ತಿದ್ದೇವೆ ಎನ್ನುವಷ್ಟರಲ್ಲಿ ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವು ಮತ್ತೆ ಸ್ಯಾಂಡಲ್ ವುಡ್ ಅಂಗಳದಲ್ಲಿ ಶೂನ್ಯ ಆವರಿಸುವಂತೆ ಮಾಡಿತ್ತು. ಆ ನೋವಿನಿಂದ ಹೊರ ಬರಲು ಇನ್ನು ಸಾದ್ಯವಾಗುತ್ತಿಲ್ಲಾ ನೀರಮೌನ ಮುಂದುವರೆದಿದೆ. ಇದೆಲ್ಲದರ ನಡುವೆ ಕನ್ನಡ ಸಿನಿ ಪ್ರೇಮಿಗಳು, ಕಲಾ ರಸಿಕರು ಚಿತ್ರಮಂದಿರಗಳ ಕಡೆ ಮುಖ ಮಾಡಿದ್ದಾರೆ, ಅವರ ಇಷ್ಟದ ಚಿತ್ರಗಳನ್ನು ನೋಡಿ ಬೆಂಬಲಿಸಿದ್ದಾರೆ.

ಇತ್ತೀಚೆಗೆ ಅಂದರೆ 2021 ಸೆಪ್ಟಂಬರ್ ಲಾಕ್ ಡೌನ್ ಸಡಿಲಗೊಳಿಸಿದ ಮೇಲೆ ಕೊಂಚ ಸಾವರಿಸಿಕೊಳ್ಳಲ್ಲು ಅವಕಾಶ ನೀಡಿದ ಮೇಲೆ ಹಲವು ಸಿನಿಮಾಗಳು ಬಿಡುಗಡೆ ಗೊಂಡವು ಅವುಗಳಲ್ಲಿ ಕೆಲವೇ ಸಿನಿಮಾಗಳು ತಾವು ಹಾಕಿದ ಬಂಡವಾಳಕ್ಕು ಮೀರಿ ತನ್ನ ಗಳಿಕೆಯನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿವೆ.  ಹಾಗಿದ್ದರು ಈ ವರ್ಷ ಗೆದ್ದ ಟಾಪ್ 10 ಸಿನಿಮಾಗಳು ಯಾವುವು, ಅದರ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಎಂದು ತಿಳಿದುಕೊಳ್ಳೋಣ.

ರಾಬರ್ಟ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಚಿತ್ರ ರಾಬರ್ಟ್ ಬಾಕ್ಸಾಫೀಸ್​ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಾಗೂ 2021 ವರ್ಷದ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಕನ್ನಡ ಚಿತ್ರದ ಹಿರಿಮೆಗೆ ಪಾತ್ರವಾಗಿದೆ. ಮಾರ್ಚ್ 11 ರಂದು ಬಿದುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸಿತ್ತು.

ಯುವರತ್ನ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಸೂಪರ್ ಹಿಟ್ ಯುವರತ್ನ ಚಿತ್ರ ಮೊದಲ ಎರಡು ವಾರಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಂಡ ನಂತರ ಅಮೇಜಾನ್​ ಪ್ರೈಮ್​ನಲ್ಲಿ ಪ್ರಸಾರವನ್ನು ಕಂಡಿತ್ತು. ಇನ್ನು ಇದು ಬರೋಬ್ಬರಿ 55 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಪೊಗರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್​ ನಲ್ಲಿ ಬಂದ ಸಿನಿಮಾ. ನಂದಕಿಶೋರ ನಿರ್ದೇಶನದಲ್ಲಿ ಮೂಡಿ ಬಂದಿರುವ ಪೊಗರು ಚಿತ್ರ ಕರಾಬು ಹಾಡಿನ ಮೂಲಕ ವಲ್ಡ್ ಫೇಮಸ್ ಆಗಿತ್ತು. ಇನ್ನು ಈ ಚಿತ್ರ ಅಂದಾಜು 60 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಸಲಗ: ದುನಿಯಾ ವಿಜಯ್ ನಟಿಸಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದ ಸಿನಿಮಾ ಸಲಗ. ಡಾಲಿ ಧನಂಜಯ್ ಹಾಗೂ ಸಂಜನಾ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.ಪಕ್ಕಾ ಮಾಸ್ ಸಿನಿಮಾವಾಗಿರುವ ಸಲಗ ಚಿತ್ರ ಅಂದಾಜು 45 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿತ್ತು.

ಕೋಟಿಗೊಬ್ಬ 3: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಚಿತ್ರ ಲೇಟಾಗಿ ಬಿಡುಗಡೆಯಾದರೂ ಕೂಡ ಲೇಟೆಸ್ಟ್ ಆಗಿ ಬಾಕ್ಸಾಫೀಸ್ ಕಲೆಕ್ಷನ್ ರೆಕಾರ್ಡ್ ಮಾಡಿದೆ. ಕೋಟಿಗೊಬ್ಬ 3 ಚಿತ್ರ ಬಾಕ್ಸಾಫೀಸ್ ನಲ್ಲಿ ಅಂದಾಜು 75 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದೆ.

ರತ್ನನ್ ಪ್ರಪಂಚ: ಡಾಲಿ ಧನಂಜಯ್ ನಾಯಕ ನಟನಾಗಿ ಹಾಗೂ ರೆಬ ಮೋನಿಕಾ ನಾಯಕಿಯಾಗಿ ನಟಿಸಿರುವ ರತ್ನನ್ ಪ್ರಪಂಚ ಚಿತ್ರ ಓಟಿಟಿ ಅಮೇಜಾನ್​ ಪ್ರೈಮ್ ನಲ್ಲಿ ಬಿಡುಗಡೆಯಾದರೂ ಕೂಡ ಉತ್ತಮ ರೆಸ್ಪಾನ್ಸ್ ಪಡೆಯಿತು. ಹಾಗೂ ಬರೋಬ್ಬರಿ 15 ಕೋಟಿ ರೂಪಾಯಿ ಕೊಟ್ಟು ಅಮೇಜಾನ್​ ಈ ಚಿತ್ರದ ಹಕ್ಕನ್ನು ಖರೀದಿಸಿತ್ತು.

ಸಖತ್: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಸಖತ್ ಚಿತ್ರ ಇತ್ತೀಚಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇನ್ನು ಕೂಡ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇನ್ನು ಇದು ಈಗಾಗಲೇ ಚಿತ್ರಮಂದಿರಗಳಲ್ಲಿಈ ಸಿನಿಮಾ ಅಂದಾಜು 25 ಕೋಟಿಗೂ ಅಧಿಕ ಕಲೆಕ್ಷನ್ ಕಂಡಿದೆ.

ಗರುಡ ಗಮನ ವೃಷಭ ವಾಹನ: ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಕಾಂಬಿನೇಶನ್ ​ನಲ್ಲಿ ಮೂಡಿಬಂದಿದ್ದ ಈ ಸಿನಿಮಾ ಸಖತ್​ ಕಮಾಲ್​ ಮಾಡಿತ್ತು. ಈ ಸಿನಿಮಾ ಅಂದಾಜು 35 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ.

ಮದಗಜ: ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಆಶಿಕ ರಂಗನಾಥ್ ಪ್ರಮುಖ ನಟನೆಯಲ್ಲಿ ಮೂಡಿಬಂದಿರುವ ಮದಗಜ ಚಿತ್ರ ಬಿಡುಗಡೆಯಾಗಿ ಈಗಾಗಲೇ ಅಂದಾಜು 38 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

****

Written By
Kannadapichhar

Leave a Reply

Your email address will not be published. Required fields are marked *