2021ರ ಶ್ರೀಮಂತ ನಟ ಶ್ರೀಮಂತ ಬಡವ ರಾಸ್ಕಲ್
2021 ಕೋವಿಡ್ ನಿಂದಾಗಿ ಅರ್ಧ ವರ್ಷ ಇಂಡಸ್ಟ್ರಿ ಲಾಸ್‌ನಲ್ಲಿತ್ತು, ಆದ್ರೆ ತಮ್ಮ ಬ್ಲಾಕ್ ಬಸ್ಟರ್ ಪಿಚ್ಚರ್ ಗಳ ಮೂಲಕ ಶ್ರೀಮಂತವಗಿರೋದು ಮಾತ್ರ ಬಡವ ರಾಸ್ಕಲ್ ಅರ್ಥಾತ್ ಡಾಲಿ ಧನಂಜಯ. ಈ ವರ್ಷ ಡಾಲಿ ಧನಂಜಯ ಅಭಿನಯದ ಒಟ್ಟು 6 ಸಿನಿಮಾಗಳು ರಿಲೀಸ್ ಆಗಿವೆ. ಅದ್ರಲ್ಲಿ 5 ಸಿನಿಮಾಗಳು ಕನ್ನಡದವು. ಒಂದು ತೆಲುಗು ಸಿನಿಮಾ. ಅಚ್ಚರಿ ಏನಪ್ಪ ಅಂದ್ರೆ ಇಷ್ಟೂ ಸಿನಿಮಾಗಳು ಬ್ಲಾಕ್ ಬಸ್ಟರ್ ಸಿನಿಮಾಗಳು, ಈ ವರ್ಷ ಗೆದ್ದಿರೋ 6 ಸಿನಿಮಾಗಳಲ್ಲೂ ಡಾಲಿ ಧನಂಜಯ ನಟಿಸಿದ್ದಾರೆ. ಆದ್ರೆ ಈ ಆರು ಸಿನಿಮಾಗಳ ಪೈಕಿ ಡಾಲಿ ಹೀರೋ ಆಗಿರೋದು ಜಸ್ಟ್ 2 ಸಿನಿಮಾಗಳಲ್ಲಿ ಮಾತ್ರ.

ವರ್ಷದ ಆರಂಭದಲ್ಲಿ ತೆರೆ ಕಂಡ ಧ್ರುವಾ ಸರ್ಜಾ ಅಭಿನಯದ ಪೊಗರು, ಪುನೀತ್ ಅಭಿನಯದ ಯುವರತ್ನ ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಕೊಂಡಿದ್ದ ಡಾಲಿ ಇತ್ತೀಚೆಗೆ ರಿಲೀಸ್ ಆದ ತೆಲುಗಿನ ಬಿಗ್ ಸಿನಿಮಾ ಪುಷ್ಪದಲ್ಲೂ ನೆಗೆಟೀವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ರು, ಇನ್ನೂ ಸಲಗ ಸಿನಿಮಾದಲ್ಲಿ ಒಂದು ಲೀಡ್ ಸಪೋರ್ಟಿಂಗ್ ರೋಲ್‌ನಲ್ಲಿ ನಟಿಸಿರೋ ಡಾಲಿ, ಸಿನಿಮಾದ ಹೈಲೈಟ್. ಡಾಲಿ ನಾಯಕನಾಗಿ ನಟಿಸಿ ಅಮೇಜಾನ್ ಪ್ರೈಂನಲ್ಲಿ ತೆರೆಕಂಡ ರತ್ನನ್ ಪ್ರಪಂಚ ಸುಫರ್ ಹಿಟ್ ಆಯ್ತು, ಇತ್ತೀಚೆಗೆ ತೆರೆಕಂಡ ಅವ್ರದ್ದೇ ನಿರ್ಮಾಣದ ಬಡವ ರಾಸ್ಕಲ್ ಕಮಾಲ್ ಮಾಡ್ತಿದೆ. ಅಲ್ಲಿಗೆ ಈ ವರ್ಷ ಅಂದ್ರೆ 2021 ಡಾಲಿ ಪಾಲಿಗೆ ಮಾತ್ರ ಲಕ್ಕಿ ವರ್ಷ.

