ಗೂಗ್ಲಿ ನಿರ್ದೇಶಕ ಪವನ್ ಒಡೆಯರ್ ಮಗ ಅಪ್ಪನಿಗೆ ಗೂಗ್ಲಿ ಹಾಕಿದ್ದಾರೆ. ಕನ್ನಡದ ಭರವಸೆಯ ನಿರ್ದೇಶಕ ಪವನ್ ಒಡೆಯರ್ ಇವತ್ತು ತಮ್ಮ ಬರ್ತ್ ಡೆ ಸೆಲೆಬ್ರೇಟ್ ಮಾಡಿಕೊಳ್ತಾ ಇದ್ರೆ, ಅಪ್ಪನ ಬರ್ತ್ ಡೇ ಗಿಫ್ಟಾಗಿ ಮಗಾ ಹುಟ್ಟಿದ್ದಾನೆ.

ಪವನ್ ಒಡೆಯರ್ ಬರ್ತ್ ಡೇ ದಿನವೇ ಮಗ ಹುಟ್ಟಿರೋದು ಪವನ್-ಅಪೇಕ್ಷಾ ದಂಪತಿಗಳಿಗೆ ಖುಷಿ ತಂದಿದೆ. ಈ ಡಬಲ್ ಸಂಭ್ರಮವನ್ನ ಪವನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಾ. ಜಗತ್ತಲ್ಲಿ ಇದಕ್ಕಿಂತ ಬೆಸ್ಟ್ ಬರ್ತ್ ಡೇ ಗಿಫ್ಟ್ ಏನಿದೆ ಅಂದಿದ್ದಾರೆ.

ಸದ್ಯ ರೇಮೊ ಸಿನಿಮಾದ ಪೋಸ್ಟ್ ಪ್ರೊಡ ಕ್ಷನ್ ನಲ್ಲಿ ಬ್ಯುಸಿಯಾಗಿರೋ ಪವನ್, ತಮ್ಮದೇ ಬ್ಯಾನರ್ ನಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಬರ್ತಾನೆ ಅಪ್ಪನಿಗೆ ಗೂಗ್ಲಿ ಹಾಕಿರೋ ಮಗ. ಹೀಗೆ ಅಪ್ಪ-ಅಮ್ಮನಿಗೆ ಖುಷಿಯನ್ನ ತರ್ಲಿ ಅನ್ನೋದೇ ಚಿತ್ರರಸಿಕರ ಆಶಯ
