ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಮುದ್ದುಮುಖದ ಸುಂದರ ಚೆಲುವೆ ಸಂಜನಾ ಆನಂದ್ ಗೆ ಈಗ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡು.

ಬಹುಬೇಗನೆ ಕನ್ನಡದ ಎಲ್ಲಾ ವಯೋಮಾನದವರ ನಿದ್ದೆ ಕೆಡಿಸಿದ ಚೆಲುವೆ, ಸಂಜನಾ ಕೈಯಲ್ಲೀಗ ನಾಲ್ಕರಿಂದ ಐದು ಸಿನಿಮಾಗಳಿವೆ. ಅದು ಕೂಡ ಬಹು ನಿರೀಕ್ಷಿತ ಸಿನಿಮಾಗಳು.

ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಸಲಗ’ದ ನಾಯಕಿಯಾಗಿರೋ ಸಂಜನಾ ಇದರ ಜೊತೆಗೆ ಖ್ಯಾತ ಅಂಕರ್ ಶೀತಲ್ ಶೆಟ್ಟಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳ್ತಿರೋ ‘ವಿಂಡೋ ಸೀಟ್’ ನಲ್ಲಿ ನಿರೂಪ್ ಭಂಡಾರಿಗೆ ಜೋಡಿಯಾಗಿದ್ದಾರೆ.

ಎ ಪಿ ಅರ್ಜುನ್ ನಿರ್ದೇಶನದ ‘ಕಿಸ್’ ಸಿನಿಮಾದ ಸೀಕ್ವೆಲ್ ಅಂತ್ಲೆ ಹೇಳಲಾಗ್ತಿರೋ ‘ಅದ್ದೂರಿ ಲವರ್’ನಲ್ಲಿ ಸಂಜನಾ, ವಿರಾಟ್ ಗೆ ನಾಯಕಿ. ನಟ ಅಜಯ್ ರಾವ್ ನಟಿಸ್ತಾ ಇರೋ ಶೋಕಿಲಾಲ ಸಿನಿಮಾದಲ್ಲೂ ಸಂಜನಾ ಆನಂದ್ ಹೀರೋಯಿನ್.

ಈ ಸಿನಿಮಾಗಳ ಜತೆಗೆ ಕುಶ್ಕಾ, ಕ್ಷತ್ರಿಯ ಮಳೆಬಿಲ್ಲು ಸಿನಿಮಾಗಳಿಗೂ ಸಂಜನಾ ಆನಂದ್ ರ ಹೊಳಪು ರಂಗೇರಿಸಲಿದೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಸಿನಿಮಾ ರಂಗಕ್ಕೆ ಕಾಲಿಟ್ಟಿರುವ ಸಂಜನಾರ ಈ ಬೆಳವಣಿಗೆ ನಿಜಕ್ಕೂ ಖುಷಿ ಕೊಡುವಂತದ್ದು.
