2ನೇ ಗಾಳಿಪಟ ರೆಡಿಆಯ್ತು ದಾರ ಹಿಡಿದು ನಿಂತಿದ್ದಾರೆ ಭಟ್ರು ಹಾರಿಸೋದಷ್ಟೆ ಬಾಕಿ ..!

ಗಾಳಿಪಟ -2 ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ನಿರ್ದೇಶಕ ಯೋಗರಾಜ ಭಟ್ ತಿಳಿಸಿದ್ದಾರೆ. ಚಿತ್ರದ ಕುರಿತು ಫೇಸ್‌ಬುಕ್‌ನಲ್ಲಿ ಫೋಸ್ಟ್ ಮಾಡಿರುವ ಅವರು, ‘ನಮಸ್ತೆ, ಗಾಳಿಪಟ -2 ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಜೈ ತಂಡ. ಅತೀ ಶೀಘ್ರದಲ್ಲೇ ಬಾಕಿ ಸುದ್ದಿ..’ ಎಂದು ಬರೆದುಕೊಂಡಿದ್ದಾರೆ.
ನಿರ್ದೇಶಕ ಯೋಗರಾಜ ಭಟ್ ಅವರು 2008ರಲ್ಲಿ ಕೊಟ್ಟ ಹಿಟ್ ಚಿತ್ರ ‘ಗಾಳಿಪಟ’. ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್, ಅನಂತ ನಾಗ್ ಅವರ ತಾರಾಗಣ ಇದ್ದ ಈ ಚಿತ್ರ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಇದೀಗ ಭಟ್ಟರು ಎರಡನೆಯ ಬಾರಿಗೆ ಗಾಳಿಪಟ ಹಾರಿಸಲು ದಾರ ಹಿಡಿದು ನಿಂತಿದ್ದಾರೆ.
ಚಿತ್ರದ ನಾಯಕಿಯರಾಗಿ ವೈಭವಿ, ಸಂಯುಕ್ತ ಮೆನನ್, ಶರ್ಮಿಳಾ ಮಾಡ್ರೆ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ರಮೇಶ್ ರೆಡ್ಡಿ ಅವರು ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಣೆಯಾಗಬೇಕಿದ್ದು, ಪ್ರೇಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.


