125ನೇ ಸಿನಿಮಾವನ್ನ ಶಿವಣ್ಣ ಹೋಂ ಬ್ಯಾನರ್ ನಲ್ಲಿ ಮಾಡಿದ್ಯಾಕೆ?

ಶಿವಣ್ಣನ ಮೈಲ್‌ಸ್ಟೋನ್ ಸಿನಿಮಾಗಳ ರೆಕಾರ್ಡ್ ಏನ್ ಗೊತ್ತಾ ?
ಡಾ.ಶಿವರಾಜ್ ಕುಮಾರ್ … ಅಣ್ಣಾವ್ರ ಮಗ ಅನ್ನೋ ಪಟ್ಟ ಇದ್ದರು ಕೂಡ, ಸಿನಿಮಾರಂಗಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡು ಬಂದ ಕಲಾವಿದ… ಎಂಥದ್ದೇ ಪಾತ್ರವಾದರೂ ಜೀವ ತುಂಬೋ ಶಿವಣ್ಣ ಈಗ ನಿರ್ಮಾಪಕರಾಗಿದ್ದಾರೆ… ತಮ್ಮದೇ 125ನೇ ಸಿನಿಮಾವನ್ನ ನಿರ್ಮಾಣ ಮಾಡೋ ಮೂಲಕ ಪ್ರೋಡ್ಯೂಸರ್ ಆಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಳ್ತಿದ್ದಾರೆ… ಅಷ್ಟಕ್ಕೂ ಶಿವಣ್ಣ ಯಾಕೆ ಇಷ್ಟು ವರ್ಷಗಳ ನಂತ್ರ ನಿರ್ಮಾಣ ಮಾಡೋ ನಿರ್ಧಾರ ಮಾಡಿದ್ರು ಗೊತ್ತಾ…ತಮ್ಮ 125ನೇ ಚಿತ್ರವೇ ಯಾಕೆ ನಿರ್ಮಾಣಕ್ಕೆ ಆಯ್ಕೆ ಮಾಡಿದ್ರು, ಅನ್ನೋದರ ಹಿಂದಿದೆ ಸಖತ್ ಇಂಟ್ರೆಸ್ಟಿಂಗ್ ಸ್ಟೋರಿ…..
ಪ್ಲೊ…..
ಶಿವಣ್ಣ ತಮ್ಮ 125ನೇ ಸಿನಿಮಾ ನಿರ್ಮಾಣ ಮಾಡಿರೋದ್ರ ಹಿಂದೆ ಸಖತ್ ಇಂಟ್ರೆಸ್ಟಿಂಗ್ ವಿಷ್ಯಾ ಇದೆ… ಯೆಸ್ ಶಿವಣ್ಣನ ಸಿನಿಮಾ ಕೆರಿಯರ್ ನಲ್ಲಿ ಮೈಲ್ ಸ್ಟೋನ್ ಅಂತ ಯಾವ ಸಿನಿಮಾಗಳಿದೆಯೋ ಅವೆಲ್ಲವೂ ಕೂಡ ಸೂಪರ್ ಡೂಪರ್ ಹಿಟ್… ಶಿವಣ್ಣ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಮೊದಲ ಸಿನಮಾ ಆನಂದ್… ಈ ಸಿನಿಮಾ ಇಡೀ ಇಂಡಸ್ಟ್ರಿ ಶಿವಣ್ಣನತ್ತ ನೋಡುವಂತೆ ಮಾಡ್ತು…
ಪ್ಲೋ…ಆನಂದ್
ಅದಾದ ನಂತ್ರ ಶಿವಣ್ಣ ಅಭಿನಯದ 25ನೇ ಸಿನಿಮಾ ಓಂ … ಉಪ್ಪಿ ಡೈರೆಕ್ಷನ್ ನಲ್ಲಿ ಶಿವಣ್ಣ ಸತ್ಯನಾಗಿ ಇಂದಿಗೂ ಪ್ರೇಕ್ಷಕರ ಕಣ್ಣ ಮುಂದಿದ್ದಾರೆ…ಇಲ್ಲಿಯವರೆಗೂ ಅಂತದೊಂದು ಸಿನಿಮಾ ಇಂಡಸ್ಟ್ರಿಯಲ್ಲಿ ಬರಲೇ ಇಲ್ಲ… ಓಂ ಚಿತ್ರ ಪದೇ ಪದೇ ಥಿಯೇಟರ್ ನಲ್ಲಿ ರೀ ರಿಲೀಸ್ ಆಗ್ತಾನೆ ಇರುತ್ತೆ.. ಅದೆಷ್ಟು ಬಾರಿ ರಿ ರಿಲೀಸ್ ಆಗಿದೆ ಅಂದ್ರೆ, ಮತ್ತೊಮ್ಮೆ ಇಂಥಾ ಸಾಧನೆಯನ್ನ ಕನ್ನಡದ ಯಾವ ಸಿನಿಮಾನೂ ಮಾಡಲಾರದು. ಅದು ಕೂಡ ಶಿವರಾಜ್ ಕುಮಾರ್ ಕೆರಿಯರ್ ನಲ್ಲಿ ಮೈಲ್ ಸ್ಟೋನ್ ….
ಪ್ಲೋ…
ಇನ್ನು ಶಿವರಾಜ್ ಕುಮಾರ್ ಆಕ್ಟ್ ಮಾಡಿದ 50ನೇ ಸಿನಿಮಾ ಎಕೆ 47…ಈ ಸಿನಿಮಾ ಕೂಡ ಬ್ಲಾಕ್‌ಬಸ್ಟರ್ ಹಿಟ್. ಶಿವರಾಜ್ ಕುಮಾರ್ ಕೆರಿಯರ್ ನಲ್ಲಿ ಡಿಫ್ರೆಂಟ್ ಸಿನಿಮಾಗಳು ಅಂತ ಲಿಸ್ಟ್ ಮಾಡಿದ್ರೆ, ಅದ್ರಲ್ಲಿ ಎಕೆ 47 ಕೂಡ ಸೇರಿಕೊಳ್ಳುತ್ತೆ…ರಾಮ್ ಆಗಿ ಶಿವಣ್ಣ ಇನ್ನೂ ಕೂಡ ಅಭಿಮಾನಿಗಳ ಕಣ್ಣಲ್ಲಿ ಉಳಿದುಬಿಟ್ಟಿದ್ದಾರೆ..ಈ ಸಿನಿಮಾ ಬಹುತೇಕ ಥಿಯೇಟರ್ ನಲ್ಲಿ 175 ದಿನಗಳನ್ನ ಪೂರೈಸಿತ್ತು…
ಪ್ಲೋ….
ಇನ್ನು ಶಿವಣ್ಣನ 75 ನೇ ಸಿನಿಮಾ ಕೂಡ ಅವ್ರ ಕೆರಿಯರ್ ನಲ್ಲಿ ಮೈಲ್ ಸ್ಟೋನ್ ಆಗಿ ನಿಂತಿದೆ… ಶ್ರೀರಾಮ್ ಸಿನಿಮಾ ಹ್ಯಾಟ್ರಿಕ್ ಹೀರೋ ಅಭಿನಯದ 75ನೇ ಸಿನಿಮಾ ̤̤̤ಈ ಚಿತ್ರದ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದುಕೊಟ್ಟಿತ್ತು..ಅದ್ರ ಜೊತೆಗೆ ಉತ್ತರ ಕರ್ನಾಟಕದಲ್ಲಿ ಶಿವಣ್ಣನಿಗೆ ಮತ್ತಷ್ಟು ಅಭಿಮಾನಿ ಬಳಗ ಹುಟ್ಟುಕೊಳ್ತು.
ಪ್ಲೋ…
ಇನ್ನು ಹ್ಯಾಟ್ರಿಕ್ ಹೀರೋ ಅಭಿನಯದ 100ನೇ ಸಿನಿಮಾ ಜೋಗಯ್ಯ. ಪ್ರತಿ ಸ್ಟಾರ್ ಕೆರಿಯರ್ ನಲ್ಲಿ 100ನೇ ಸಿನಿಮಾ ಸಖತ್ ಸ್ಪೆಷಲ್ ಆಗಿರುತ್ತೆ… ಜೋಗಿ ಹಿಟ್ ಕೊಟ್ಟಿದ್ದ ಕಾರಣ ಶಿವಣ್ಣನ 100ನೇ ಸಿನಿಮಾ ಮತ್ತೆ ಪ್ರೇಮ್ ಕಾಂಬಿನೇಷನ್ ನಲ್ಲಿಯೇ ಸಿದ್ದವಾಯ್ತು… ದಿನಗಳ ಲೆಕ್ಕದಲ್ಲಿ ಸೌಂಡ್ ಮಾಡದೇ ಇದ್ದರು…ಬಾಕ್ಸ್ ಆಫೀಸ್ ನಲ್ಲಿ ಜೋಗಯ್ಯನ ಖದರ್ ಹೊಸ ಹೊಸ ದಾಖಲೆಗಳನ್ನ ಸೃಷ್ಟಿ ಮಾಡ್ತು…ಹಾಗಾಗಿ ಶಿವಣ್ಣನ ಮೈಲ್ ಸ್ಟೋನ್ ಅಂತ ಇರೋ ಸಿನಿಮಾಗಳಿಗೆ ಬಂಡವಾಳ ಹಾಕಿದ ನಿರ್ಮಾಪಕರೆಲ್ಲರೂ ಸಖತ್ ಖುಷಿಯಾಗಿದ್ದಾರೆ… ಯಾಕಂದ್ರೆ ಬಂಡವಾಳದ ಡಬಲ್ , ಥ್ರಿಬಲ್ ಹಣವನ್ನ ತಂದುಕೊಟ್ಟಿದ್ದಾರೆ ಶಿವರಾಜ್ ಕುಮಾರ್ ….
ಪ್ಲೋ…
ಸದ್ಯ ರಿಲೀಸ್ ಗೆ ರೆಡಿ ಇರೋ ವೇದ ಸಿನಿಮಾ ಶಿವಣ್ಣನ ಜೀವನದಲ್ಲಿ ತುಂಬಾನೇ ಸ್ಪೆಷಲ್ …ಇಷ್ಟು ವರ್ಷದಲ್ಲಿ ಶಿವರಾಜ್ ಕುಮಾರ್ ಟಚ್ ಮಾಡದಂತಹ ಕಂಟೆಂಟ್ ಒಂದನ್ನ ಈ ಚಿತ್ರದಲ್ಲಿ ಮೂಲ ಕಥೆಯನ್ನಾಗಿ ತೆಗೆದುಕೊಳ್ಳಲಾಗಿದೆ…ಶಿವಣ್ಣನ ಪ್ರಕಾರ ಬೈರತಿ ರಣಗಲ್ ಚಿತ್ರ 125ನೇ ಸಿನಿಮಾ ಆಗಬೇಕಿತ್ತು , ಕಾರಣಾಂತರದಿಂದ ಅದು ಆಗಲಿಲ್ಲ..ಈಗ ವೇದ ಕೂಡ ಜನರಿಗೆ ಇಷ್ಟವಾಗುವಂತಹ ಕಂಟೆಂಟ್.,, ಮತ್ತೊಂದು ಕಡೆ ಮತ್ತದೇ ಮೈಲ್ ಸ್ಟೋನ್ ನಂಬರ್ ಇರೋ ಸಿನಿಮಾ. ಹಾಗಾಗಿ ಶಿವರಾಜ್ ಕುಮಾರ್ ಅವ್ರೇ ಈ ಚಿತ್ರ ನಿರ್ಮಾಣ ಮಾಡ್ತಿದ್ದು, ಅದರೊಟ್ಟಿಗೆ ಇದು ಕೂಡ ಬ್ಲಾಕ್ ಬಾಸ್ಟರ್ ಹಿಟ್ ಆಗೋದು ಕನ್ಫರ್ಮ್ …ಯಾಕಂದ್ರೆ ಅಂದಿನಿಂದ ಇಂದಿನವರೆಗೂ ಶಿವರಾಜ್ ಕುಮಾರ್ ಮೈಲ್ ಸ್ಟೋನ್ ಚಿತ್ರ ಸೋತಿರೋ ಇತಿಹಾಸವೇ ಇಲ್ಲ….
ಪ್ಲೋ….
ಪವಿತ್ರ. ಬಿ