News

ಹೊಸ ವರ್ಷಕ್ಕೆ(ಜ 7)ರಾಜಮೌಳಿ ಯ ಆರ್ ಆರ್ ಆರ್ ಸಿನಿಮಾ ರಿಲೀಸ್..!

ಹೊಸ ವರ್ಷಕ್ಕೆ(ಜ 7)ರಾಜಮೌಳಿ ಯ ಆರ್ ಆರ್ ಆರ್  ಸಿನಿಮಾ ರಿಲೀಸ್..!
  • PublishedOctober 3, 2021

ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ (ರೈಸ್ ರೋರ್ ರಿವೋಲ್ಟ್) ಸಿನಿಮಾ ಬಿಡುಗಡೆ ದಿನಾಂಕ ಹೊರಬಿದ್ದಿದೆ. 2022 ಜನವರಿ 7 ಹೊಸ ವರ್ಷಕ್ಕೆ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ ಎಂದು ಚಿತ್ರತಂಡ ಘೋಷಿಸಿದೆ.

ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿ ಆರ್ ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ, ಪ್ರೇಕ್ಷಕರಲ್ಲಿ ತುಂಬಾ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ೨೦ನೇ ಶತಮಾನದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮ ರಾಜು ಮತ್ತು ಕುಮ್ರಂ ಭೀಮ್ ಅವರ ಪಾತ್ರಗಳಲ್ಲಿ ಕ್ರಮವಾಗಿ ರಾಮಚರಣ್ ಮತ್ತು ಜೂನಿಯರ್ ಎನ್ ಟಿ ಆರ್ ನಟಿಸಿದ್ದಾರೆ. ಬಾಹುಬಲಿ ಕಥೆ ಬರೆದಿದ್ದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಈ ಚಿತ್ರಕ್ಕೂ ಕಥೆ ರಚಿಸಿದ್ದಾರೆ.

ರಾಜಮೌಳಿ ಸಿನಿಮಾದಲ್ಲಿ ಬಾಲಿವುಡ್ ನಟರಾದ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ನಟಿಸಿದ್ದಾರೆ. ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ‘ಆರ್ ಆರ್ ಆರ್’ ಸಿನಿಮಾ ಬಿಡುಗಡೆ ಮಾಡುವ ಯೋಚನೆಯನ್ನು ಸಿನಿಮಾ ತಂಡ ಹೊಂದಿತ್ತು. ಅದರೆ ಕೊರೊನಾ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲ್ಪಟ್ಟಿತ್ತು.

****

Written By
Kannadapichhar

Leave a Reply

Your email address will not be published. Required fields are marked *