ಹೊಯ್ಸಳ ವಿಮರ್ಶೆ- ಮಾಸ್ ಗೂ ಸೈ ಕ್ಲಾಸ್ ಗೂ ಜೈ-ಡಾಲಿ ಡೆವಿಲ್ ನವೀನ್ ವಿಲನ್


ಡಾಲಿ ಧನಂಜಯ್ ಅಭಿನಯದ 25ನೇ ಸಿನಿಮಾ ಹೊಯ್ಸಳ ….ಸಾಕಷ್ಟು ಸ್ಪೆಷಾಲಿಟಿಸ್ ಇಟ್ಕೊಂಡು ರಿಲೀಸ್ ಆಗಿರೋ ಹೊಯ್ಸಳ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ..ಹೊಯ್ಸಳ ಕಂಪ್ಲೀಟ್ ಕಮರ್ಷಿಯಲ್ ಸಿನಿಮಾ ಅನ್ನೋದು ಟ್ರೇಲರ್ ನೋಡಿದಾಗ್ಲೆ ಗೊತ್ತಾಗಿತ್ತು ಆದ್ರೆ ಸಿನಿಮಾ ನೋಡಿದ್ಮೆಲೆ ಈ ಚಿತ್ರದಲ್ಲಿ ಕಮರ್ಷಿಯಲ್ ಮಾತ್ರವಲ್ಲದೇ ಬೇರೆ ಕಂಟೆಂಟ್ ಇದೆ ಅನ್ನೋ ಫೀಲ್ ಆಗುತ್ತೆ….
ಡಾಲಿ ಫ್ಯಾನ್ಸ್ ಗೆ ಬೇಕಿರೋ ಎಲ್ಲಾ ಎಲಿಮೆಂಟ್ಸ್ ಜೊತೆಗೆ ಒಂದು ಸೆನ್ಸಿಟಿವ್ ವಿಚಾರವನ್ನ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ವಿಜಯ್ ಎನ್ …ಇನ್ನು ಸಿನಿಮಾದಲ್ಲಿ ಆಕ್ಷನ್ , ಕಾಮಿಡಿ , ಲವ್ ಸ್ಟೋರಿ, ಒಳ್ಳೆ ಮೆಸೆಜ್ ಎಲ್ಲವೂ ಒಳಗೊಂಡಿದೆ…ಚಿತ್ರದಲ್ಲಿ ಡಾಲಿ ಗುರುದೇವ್ ಹೊಯ್ಸಳನಾಗಿ ಅಬ್ಬರಿಸಿದ್ರೆ ಡಾಲಿಗೆ ಸಿನಿಮಾ ಪೂರ್ತಿ ಎದುರಾಳಿಯಾಗಿ ನಿಲ್ಲೋದು ಗುಲ್ಟು ಸಿನಿಮಾ ಖ್ಯಾತಿಯ ನವೀನ್ ಶಂಕರ್ …ಇನ್ನು ಪ್ರತಾಪ್ ನಾರಾಯಣ್ ಕೂಡ ಸಿನಿಮಾ ಉದ್ದಕ್ಕೂ ಖಡಕ್ ಲುಕ್ ನಿಂದ ಹೊಯ್ಸಳನನ್ನ ಕೆಣಕುತ್ತಲೇ ಇರುತ್ತಾರೆ… ಕೆಜಿಎಫ್ ಅವಿನಾಶ್ , ಅಚುತ್ ಕುಮಾರ್, ರಾಘು ಶಿವಮೊಗ್ಗ, ಹೇಮಂತ್ ಕುಮಾರ್ , ಮಾನಸಿ ಸುಧೀರ್ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ..
ಡಾಲಿ ಹಾಗೂ ನಾಗಭೂಷನ್ ಸೀನ್ ಗಳು ಪ್ರೇಕ್ಷಕರಿಗೆ ಮಜಾಕೊಡೋದ್ರ ಜೊತೆಗೆ ನಾಗಭೂಷಣ್ ಇನ್ನೋ ಸ್ವಲ್ಪ ಸಮಯ ಸ್ಕ್ರೀನ್ ಮೇಲೆ ಇರಬೇಕಿತ್ತು ಅನ್ಸುತ್ತೆ…ಅಮೃತಾ ಹಾಗೂ ಡಾಲಿ ಸೀನ್ ಗಳು ಕಮ್ಮಿನೇ ಇದ್ದು ಇರೋ ಅಷ್ಟು ಸೀನ್ ಗಳು ನೋಡೋದಕ್ಕೆ ಖುಷಿಕೊಡುತ್ತೆ…ಇದ್ರ ಜೊತೆಗೆ ಸಿನಿಮಾ ಮೇಕಿಂಗ್ ಹಾಗೂ ಕ್ಯಾರೆಕ್ಟರ್ ಇಂಟ್ರಡಕ್ಷನ್ ಸೀನ್ ಗಳು ಸೂಪರ್ ಆಗಿದೆ…ಧನಂಜಯ ಫ್ಯಾನ್ಸ್ ಗೆ ಅಪರೂಪಕ್ಕೆ ಅವ್ರ ಹೀರೋನ ನೋಡಿ ವಾವ್ಹ್ ಅಂತ ಫೀಲ್ ಮಾಡೋಕೆ ಚಾನ್ಸ್ ಕೊಟ್ಟಿದ್ದಾರೆ ಕ್ಯಾಮೆರಾ ಮ್ಯಾನ್ ಕಾರ್ತಿಕ್ ….
ಇನ್ನು ಹಾಡುಗಳು ಬಹುತೇಕ ಮಾಂಟೇಜ್ ನಲ್ಲೇ ಪಾಸ್ ಆಗುತ್ತೆ.. ಸಿನಿಮಾ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸಖತ್ತಾಗಿದೆ…ಒಟ್ನಲ್ಲಿ ಹೊಯ್ಸಳ ಕಂಪ್ಲೀಟ್ ಕಮರ್ಷಿಯಲ್ ವಿತ್ ಮೆಸೆಜ್ ಇರೋ ಸಿನಿಮಾ ಅಂದ್ರೆ ತಪ್ಪಾಗೋದಿಲ್ಲ… ನಿರ್ದೇಶಕ ವಿಜಯ್ ಅವ್ರ ಎರಡನೇ ಪ್ರಯತ್ನ ಇದಾಗಿದ್ದು ಮುಂದಿನ ಸಿನಿಮಾ ಮತ್ತಷ್ಟು ಚೆನ್ನಾಗಿರುತ್ತೆ ಅನ್ನೋ ಭರವಸೇ ಈ ಸಿನಿಮಾ ಮೂಲಕ ಕೊಟ್ಟಿದ್ದಾರೆ…ಇನ್ನು ಗುರುದೇವ್ ಹೊಯ್ಸಳ ನ್ಯಾಯಕ್ಕಾಗಿ ಬಡವರ ಪರವಾಗಿ ಪ್ರಾಣ ಹೊತ್ತೆ ಇಟ್ಟು ಹೋರಾಟ ಮಾಡೋ ನಿಷ್ಠವಂತ ಅಧಿಕಾರಿ ಅನ್ನೋದು ಒನ್ ಲೈನ್ ಸ್ಟೋರಿ ಆದ್ರೆ…ಗುರುದೇವ್ ಪೊಲೀಸ್ ಆಗಿಯೂ ಏನೆಲ್ಲಾ ಸಮಸ್ಯೆ ಅನುಭವಿಸ್ತಾನೆ ಒಂದು ದಿನ ರಾಜ್ಯದಲ್ಲಿ ಪೊಲೀಸ್ ಗಳೇ ಇಲ್ಲ ಅಂದ್ರೆ ಏನಾಗುತ್ತೆ…ಬೆಳಗಾವಿಯಲ್ಲಿ ನಡೆಯೋ ಘಟನೆಗೂ ಹೊಯ್ಸಳನಿಗೂ ಇರೋ ಸಂಬಂಧವೇನು ಕ್ರಿಮಿನಲ್ಸ್ ಗಳಿಂದ ಹೊಯ್ಸಳ ಫ್ಯಾಮಿಲಿಯನ್ನ ಹೇಗೆ ಕಾಪಾಡಿಕೊಳ್ತಾನೆ ಅನ್ನೋದನ್ನ ನೀವು ಥಿಯೇಟರ್ ನಲ್ಲಿ ನೋಡಿ ಎಂಜಾಯ್ ಮಾಡಬೇಕು….
