ಹೆಣ್ಣು ಮಕ್ಕಳ ಪೋಷಕರಿಗೆ ಕರೆ ನೀಡಿದ ‘ಸಮಂತಾ’ ಏನು ಹೇಳಿದ್ದಾರೆ..?

ಸಮಂತಾ ವಿಚ್ಛೇದನ ಘೋಷಣೆ ಮಾಡಿದಾಗಿನಿಂದಲೂ ಅವರು ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿದ್ದಾರೆ. ತಮ್ಮ ದಿನಚರಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ವಿವಿಧ ರೀತಿಯ ಸಾಲುಗಳನ್ನು ಕೂಡ ಹಾಕುತ್ತಿದ್ದಾರೆ. ಈಗ ಸಮಂತಾ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಪೋಸ್ಟ್ ಮಾಡಿದ್ದಾರೆ.
‘ನಿಮ್ಮ ಮಗಳನ್ನು ಸಮರ್ಥವಾಗಿ ಬೆಳೆಸಿ. ಈ ಮೂಲಕ ತಾವು ಯಾರನ್ನು ಮದುವೆ ಆಗುತ್ತೇವೆ ಎನ್ನುವ ಚಿಂತೆಯೇ ಅವರಿಗೆ ಬರದಿರಲಿ. ಮಗಳ ಮದುವೆಗೆ ಹಣ ಕೂಡಿಡುವ ಬದಲು, ಅವರ ಶಿಕ್ಷಣಕ್ಕೆ ಆ ಹಣ ಬಳಸಿ. ಅವರನ್ನು ಮದುವೆಗೆ ಮಾನಸಿಕವಾಗಿ ಸಿದ್ಧಪಡಿಸುವ ಬದಲು ಅವರನ್ನು ವೈಯಕ್ತಿಕವಾಗಿ ಗಟ್ಟಿಗೊಳಿಸಿ. ಸೆಲ್ಫ್ ಲವ್, ಆತ್ಮವಿಶ್ವಾಸವನ್ನು ಅವರಲ್ಲಿ ಬೆಳೆಸಿ’ ಎಂದು ಸಮಂತಾ ಮನವಿ ಮಾಡಿಕೊಂಡಿದ್ದಾರೆ.
ನಟಿ ಸಮಂತಾ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ತಿಂಗಳಿಂದ ಹಲವು ಸುದ್ದಿಗಳು ಹರಿದಾಡಿದ್ದವು. ಅದರಲ್ಲಿ ಎಷ್ಟು ಸುಳ್ಳು, ಎಷ್ಟು ನಿಜ ಎಂಬುದು ತಿಳಿದಿಲ್ಲ. ನಾಗ ಚೈತನ್ಯ ಜೊತೆಗಿನ ಕಿರಿಕ್, ವಿಚ್ಛೇದನ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಬಣ್ಣಬಣ್ಣದ ಗಾಸಿಪ್ಗಳು ಕೇಳಿಬಂದಿದ್ದು ಸಮಂತಾಗೆ ನಿಜಕ್ಕೂ ಬೇಸರ ಮೂಡಿಸಿದೆ. ಹಾಗಾಗಿ ಸಮಂತಾ ಕಾನೂನು ಸಮರ ಸಾರಿದ್ದಾರೆ. ತಮ್ಮ ವಿರುದ್ಧ ಮಾನಹಾನಿ ಆಗುವಂತಹ ಮಾಹಿತಿಯನ್ನು ಪ್ರಸಾರ ಮಾಡಿದ ಯೂಟ್ಯೂಬರ್ಗಳ ಮೇಲೆ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ ನ್ಯಾಯಾಲಯದಲ್ಲಿ ಸಮಂತಾಗೆ ಹಿನ್ನಡೆ ಆಗಿತ್ತು. ಹೈದರಾಬಾದ್ನ ಸ್ಥಳೀಯ ನ್ಯಾಯಾಲಯದಲ್ಲಿ ಸಮಂತಾ ಈ ಮೊಕದ್ದಮೆ ಹೂಡಿದ್ದಾರೆ.
****