ಹುಟ್ಟುಹಬ್ಬದಂದೂ ಗಾಳಿಪಟ ಹಾರಿಸ್ತಿದ್ದಾರಂತೆ ಭಟ್ರು..!

ವಿಕಟಕವಿ ಯೋಗರಾಜ ಭಟ್ ಅವರಿಗೆ ಇಂದು(ಅ8) ಜನ್ಮ ದಿನದ ಸಂಭ್ರಮ. ಭಟ್ರು ತಮ್ಮ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ ಸ್ನೇಹಿತರಿಗೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಯೋಗರಾಜ ಭಟ್ರು ಸಾಹಿತ್ಯವೇ ಹಾಗೆ ಎಲ್ಲರಿಗೂ ಕಚಗುಳಿ ಇಡುವಂತಹ ಸಾಲುಗಳ ಮೂಲಕ ಕಂಬಳಿ ಹುಳ ಬಿಟ್ಟಂತ ಅನುಭವವನ್ನು ಕೊಡುವ ಕಲೆ ಭಟ್ರುಗಲ್ದೆ ಮತ್ಯಾರ್ಗು ಅದು ಸಾಧ್ಯಾನೇ ಇಲ್ಲಾ. ನಿರ್ದೇಶಕ ಯೋಗರಾಜ್ ಭಟ್ರ ತಮ್ಮದೇ ಸ್ಟೈಲ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.
ನಮಸ್ತೆ, ಹುಟ್ಟುಹಬ್ಬಕ್ಕೆ ಹಾರೈಸಿದ ಹಾರೈಸಲಿರುವ ಪ್ರತಿಯೊಬ್ಬ ಸ್ಯೇಹಿತ ಸ್ನೇಹಿತೆಯರಿಗೆ ಬಳಗದವರಿಗೆಲ್ಲ ನಮನ ಮತ್ತು ಧನ್ಯವಾದಗಳು, ಗಾಳಿಪಟ 2 ಚಿತ್ರೀಕರಣ ಅಂತಿಮ ಶೆಡ್ಯೂಲ್ ಚಿತ್ರೀಕರಣದಲ್ಲಿದ್ದೇನೆ.. ಜೀವ್ನ ನಡೀತಿದೆ ಶೀಘ್ರವೇ ಸಿಗೋಣ ಜೈ.. ಎಂದು ಬರೆದು ಧನ್ಯವಾದ ತಿಳಿಸಿದ್ದಾರೆ.

ಯೋಗರಾಜ್ ಭಟ್ ಅವರು ಸದ್ಯ ಗಾಳಿಪಟ 2 ಅಂತಿಮ ಹಂತದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ, ಸ್ಯಾಂಡಲ್ ವುಡ್ ಗೆ ಸೂಪರ್ ಹಿಟ್ ಚಿತ್ರಗಳನ್ನು ಕೊಡುವ ಮೂಲಕ ಸಾಕಷ್ಟು ಕಲಾವಿದರನ್ನು ಪ್ರೋತ್ಸಾಹಿಸಿರುವ ಭಟ್ರಿಗೆ ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ಸ್ ಗಳು ಶುಭಾಶಯ ತಿಳಿಸಿದ್ದಾರೆ, ಹಾಗೆಯೇ ಅಭಿಮಾನಿಗಳು ಸ್ನೇಹಿತರು ಯೋಗರಾಜ ಭಟ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
****