News

ಹಿರಿಯ ನಟ ದೊಡ್ಡಣ ಅವರ ಆರೋಗ್ಯದಲ್ಲಿ ವ್ಯತ್ಯಾಸ: ಆಸ್ಪತ್ರೆಗೆ ದಾಖಲು

ಹಿರಿಯ ನಟ ದೊಡ್ಡಣ ಅವರ ಆರೋಗ್ಯದಲ್ಲಿ ವ್ಯತ್ಯಾಸ: ಆಸ್ಪತ್ರೆಗೆ ದಾಖಲು
  • PublishedAugust 26, 2021

ಸ್ಯಾಂಡಲ್ ವುಡ್ ಹಿರಿಯ ನಟ ದೊಡ್ಡಣ್ಣ ಅನಾರೋಗ್ಯದಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲಗಳ ಪ್ರಕಾರ ಹಾರ್ಟ್ ರೇಟ್ ಕಡಿಮೆಯಾಗಿ ಸುಸ್ತಿನಿಂದ ನಿನ್ನೆ ಬೆಳಿಗ್ಗೆಯೇ (25-8-21) ದೊಡ್ಡಣ್ಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ಇಂದು ಶಾಶ್ವತ ಪೇಸ್ ಮೇಕರ್ ಅಳವಡಿಸುವ ಕಾರ್ಯ ನಡೆದಿದ್ದು, ಸದ್ಯ ಅವರು ಐಸಿಯುಲ್ಲಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.ಮೂರು ದಿನದ ಬಳಿಕ ದೊಡ್ಡಣ್ಣ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ತಿಳಿಸಿರುವುದಾಗಿ ವರದಿಯಾಗಿದೆ.

ದೊಡ್ಡಣ ಅವರು ಅನಾರೋಗ್ಯದಿಂದ ಆಸ್ಪತ್ರಗೆ ದಾಖಲಾಗಿರುವುದು ಅವರ ಆಪ್ತರಲ್ಲಿ ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗಷ್ಟೆ ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ದೊಡ್ಡಣ ಅವರು ತೀರಿಲಕೊಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡಿದ್ದರು. ಆಗ ಸ್ವತಃ ದೊಡ್ಡಣ ಅವರೆ ವೀಡಿಯೋ ಮೂಲಕ ಮಾತನಾಡಿ ಆರೋಗ್ಯವಾಗಿ ಇರುವುದಾಗಿ ಸ್ಪಷ್ಟನೆ ನೀಡಿದ್ದರು.

****

Written By
Kannadapichhar

Leave a Reply

Your email address will not be published. Required fields are marked *