News

ಹಿರಿಯ ಕಲಾವಿದೆ ಲಕ್ಷ್ಮಿದೇವಿ ಅವರನ್ನು ಸನ್ಮಾನಿಸಿದ ಸುಧಾರಾಣಿ,ಶ್ರುತಿ ಮತ್ತು ಮಾಳವಿಕ..!

ಹಿರಿಯ ಕಲಾವಿದೆ ಲಕ್ಷ್ಮಿದೇವಿ ಅವರನ್ನು ಸನ್ಮಾನಿಸಿದ ಸುಧಾರಾಣಿ,ಶ್ರುತಿ ಮತ್ತು ಮಾಳವಿಕ..!
  • PublishedSeptember 24, 2021

ಸ್ಯಾಂಡಲ್ ವುಡ್ ನ ನಟಿಯರಾದ ಸುಧಾರಾಣಿ, ಮಾಳವಿಕ ಅವಿನಾಶ್ ಮತ್ತು ಶ್ರುತಿ ಅವರು  ಹಿರಿಯ ಕಲಾವಿದ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿ ಅವರೊಂದಿಗೆ ಪ್ರೀತಿ ಮತ್ತು ಆತ್ಮೀಯತೆಯಿಂದ ಬೆರೆತು ಕಷ್ಟ ಸುಖವನ್ನು ವಿಚಾರಿಸುವಂತಹ ಸುದ್ದಿಗಳನ್ನು ಮೇಲಿಂದ ಮೇಲೆ ನೋಡುತ್ತಿದ್ದೇವೆಈಗ ಮತ್ತೆ ಹಿರಿಯ ಕಲಾವಿದೆ ಲಕ್ಷ್ಮೀದೇವಿ ಅವರ ಮನೆಗೆ ಭೇಟಿನೀಡಿದ್ದಾರೆ.

ಇನ್‍ಸ್ಟಾಗ್ರಾಂನಲ್ಲಿ ಹಿರಿಯ ಕಲಾವಿದೆ ಎಂ.ಎನ್.ಲಕ್ಷ್ಮೀದೇವಿ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸುಧಾರಾಣಿ ಅವರ ಜೊತೆಗೆ ನಟಿಯರಾದ ಶೃತಿ ಹಾಗೂ ಮಾಳವಿಕಾ ಅವಿನಾಶ್ ಸೇರಿದಂತೆ ಇತರರು ಸಹ ಇದ್ದಾರೆ. ಇದೇ ವೇಳೆ ಲಕ್ಷ್ಮೀದೇವಿ ಅವರಿಗೆ ಸನ್ಮಾನವನ್ನು ಸಹ ಮಾಡಿದ್ದಾರೆ.

ಇವರುಗಳು ನಮ್ಮ ಚಿತ್ರಗಳಿಗೆ ಅಥವಾ ಮುಖ್ಯ ಭೂಮಿಕೆ ನಿಭಾಯಿಸುವಂತಹ ನಟ, ನಟಿಯರಿಗೆ ನಿಜವಾಗಲೂ Guardian Angels ಗಳ ಹಾಗೆಯೇ ಇರುತ್ತಾರೆ. ಯಾಕಂದ್ರೆ ಪೋಷಕ ಕಲಾವಿದರು ತಮ್ಮ ಸರ್ವಸ್ವವನ್ನು ಅರ್ಪಿಸಿ, ಮುಖ್ಯ ಭೂಮಿಕೆ ನಿರ್ವಹಿಸುವ ಪಾತ್ರಗಳಿಗೆ ಅಥವಾ ಇಡೀ ಚಿತ್ರಕ್ಕೆ ಒಂದು ಬೆನ್ನೆಲುಬಾಗಿರುತ್ತಾರೆ ಅಥವಾ ಚಿತ್ರದ ಆಧಾರ ಸ್ತಂಭದಂತೆ ಇರುತ್ತಾರೆ ಎಂದು ತಿಳಿಸಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಸತ್ಯವನ್ನು ಮರೆತು, ಪೋಷಕ ಪಾತ್ರದ ಮಹತ್ವವನ್ನು ಸರಿಯಾಗಿ ಅರಿಯದೆ, ಆ ಪಾತ್ರಗಳನ್ನು ಹಿಂದಕ್ಕೆ ತಳ್ಳಲಾಗುತ್ತಿದೆ. ಪೋಷಕ ಕಲಾವಿದರಿಗೆ ಸಲ್ಲಬೇಕಾದ ಗೌರವ, ಸ್ಥಾನ ಮಾನ ಇದೆಲ್ಲವನ್ನು ಅವರಿಗೆ ಸಂಪೂರ್ಣವಾಗಿ ಕೊಡುವುದನ್ನು ಮರೆತಿದ್ದೇವೆ ಎಂದು ಸುಧಾರಾಣಿ ಬೇಸರ ವ್ಯಕ್ತಪಡಿಸಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *