ಸ್ಯಾಂಡಲ್ ವುಡ್ ಗೆ ಪ್ರಭುದೇವ್ ರಿ ಎಂಟ್ರಿ

ಭಾರತೀಯ ಚಿತ್ರರಂಗದ ಮೈಕಲ್ ಜಾಕ್ಸನ್ ಎಂದೇ ಹೆಸರಾಗಿರುವ ನೃತ್ಯ ನಿರ್ದೇಶಕ ನಟ ಹಾಗೂ ಸಿನಿಮಾ ನಿರ್ದೇಶಕ ಪ್ರಭುದೇವ್ ಸ್ವಸ್ಥಾನಕ್ಕೆ ಮರಳಿ ದ್ದಾರೆ. ಹೌದು ವಿಶ್ವದಲ್ಲೇ ನೃತ್ಯ ಪ್ರಪಂಚದ ತಾರೆಯೆಂದು ಕರೆಯಲಾಗುವ ಮೈಕಲ್ ಜಾಕ್ಸನ್ ಸ್ಟೆಪ್ ಹಾಕುತ್ತಿದ್ದರೆ ಎಂಥವರು ಮಂತ್ರಮಗ್ನರಂತೆ ಪಿಳಿಪಿಳಿ ಕಣ್ಬಿಟ್ಟು ನೋಡುತ್ತಾನೆ ಹೇಗೆ ಇರುತ್ತಿದ್ರೋ ಅದೇ ರೀತಿ ಪ್ರಭುದೇವ್ ಕೂಡ ಹಾಗಾಗಿ ಅವರನ್ನ ಇಂಡಿಯನ್ ಮೈಕಲ್ ಜಾಕ್ಸನ್ ಅಂತಾನೆ ಕರೆಯಲಾಗುತ್ತೆ, ಅಂತಹ ನೃತ್ಯಗಾರ ಪ್ರಭುದೇವ್ ಅಪ್ಪಟ ಕನ್ನಡಿಗರು.
ತೆಲುಗಿನಲ್ಲಿ ಹೆಚ್ಚು ಗುರುತಿಸಿಕೊಂಡರೂ ಆಗಾಗ್ಗೆ ತವರಿಗೆ ಬಂದು ಹೋಗುವುದಕ್ಕೆ ಪ್ರಭುದೇವ್ ಗೆ ಹಮ್ಮುಬಿಮ್ಮಗಳಿಲ್ಲ. ಈ ಹಿಂದೆ ಮನಸೆಲ್ಲಾ ನೀನೇ, ಉಪೇಂದ್ರ ಅವರ H2O, 123 ಚಿತ್ರಗಳಲ್ಲಿನ ನಟನೆ ಹಾಗೂ ನೃತ್ಯದ ಮೂಲಕ ಕನ್ನಡಿಗರನ್ನು ಹೃದಯದಲ್ಲಿ ನೆಲೆ ಮಾಡಿಕೊಂಡಿದ್ದ ಪ್ರಭುದೇವ್ ಸುದೀರ್ಘವಾದ 19 ವರ್ಷಗಳ ನಂತರ ಮತ್ತೆ ಇದೀಗ ಸ್ಯಾಂಡಲ್ ವುಡ್ ನ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಪ್ರಭು-ಪುನೀತ್ ಡಾನ್ಸ್ ಡಾನ್ಸ್:
ಡಾರ್ಲಿಂಗ್ ಕೃಷ್ಣ ನಾಯಕನಾಗಿ, ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡುತ್ತಿರುವ ‘ಲಕ್ಕಿ ಮ್ಯಾನ್’ ಸಿನಿಮಾದ ಹಾಡೊಂದರಲ್ಲಿ ಪ್ರಭುದೇವ ಮತ್ತು ಪುನೀತ್ ರಾಜ್ ಕುಮಾರ್ ಜೊತೆಯಾಗಿ ಹೆಜ್ಜೆ ಹಾಕಲಿದ್ದಾರೆ. ಈ ಇಬ್ಬರು ಸ್ಟಾರ್ ಗಳ ನೃತ್ಯವೇ ಚಿತ್ರದಲ್ಲಿ ಹೈಲೈಟ್ ಆಗಿರಲಿದ್ದು, ಹಾಡಿಗೆ ಜಾನಿ ಮಾಸ್ಟರ್ ಕೊರಿಯಾಗ್ರಫಿ ಮಾಡುತ್ತಿದ್ದಾರೆ.
****