ಸ್ಟಾರ್ ನಟರ ಮಧ್ಯೆ ಸ್ಟಾರ್ ನಿರ್ದೇಶಕ..!

ದಂತಕಥೆ ಮತ್ತು ದಂತಕಥೆಯ ಪಯಣದಲ್ಲಿರುವ ಮೆಗಾಸ್ಟಾರ್ ಚಿರಂಜೀವಿ ಮತ್ತು ಪುತ್ರ ರಾಮ್ ಚರಣ ಅವರನ್ನು ಭೇಟಿಯಾದೆ. ಇವರ ಜೊತೆ ಕಳೆದ ಸಂಜೆ ಅದ್ಭುತವಾಗಿತ್ತು. ಈ ಭೇಟಿಗೆ ಅವಕಾಶ ಕಲ್ಪಿಸಿದ ರಾಮ್ ಚರಣ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ ಚಿರಂಜೀವಿ ಅವರನ್ನು ಭೇಟಿಯಾಗೋದು ನನ್ನ ಬಾಲ್ಯದ ಕನಸಾಗಿತ್ತು ಎಂದು ಪ್ರಶಾಂತ್ ನೀಲ್ ಬರೆದುಕೊಂಡು ಇಬ್ಬರು ನಟರಿಗೂ ಮತ್ತು ಡಿವಿವಿ ಮೋವಿಸ್ ಗೆ ಟ್ಯಾಗ್ ಮಾಡಿಕೊಂಡಿದ್ದಾರೆ.
ಡಿವಿವಿ ಮೂವಿಸ್ ಸಹ ಫೋಟೋ ಹಂಚಿಕೊಂಡಿದ್ದು, ಇದರಲ್ಲಿ ಪ್ರಶಾಂತ್ ನೀಲ್, ಚಿರಂಜೀವಿ ಮತ್ತು ನಿರ್ಮಾಪದ ದಾನಯ್ಯ ಗಾರು ಅವರನ್ನು ಕಾಣಬಹುದಾಗಿದೆ. ಚಿರಂಜೀವಿ ಅವರ ಜೊತೆ ಕಳೆದ ಈ ಕ್ಷಣಗಳು ಸದಾ ನೆನಪಿನಲ್ಲಿ ಉಳಿಯಲಿವೆ ಎಂದು ಹೇಳಿದ್ದಾರೆ. ಪ್ರಶಾಂತ್ ನೀಲ್ ಮುಂದಿನ ನಿರ್ದೇಶನದ ಚಿತ್ರದಲ್ಲಿ ರಾಮ್ ಚರಣ್ ನಟಿಸಲಿದ್ದಾರೆ ಎಂಬ ಸುದ್ದಿಗಳು ಸಿನಿ ಅಂಗಳದಲ್ಲಿ ಹರಿದಾಡುತ್ತಿವೆ. ಚಿತ್ರ ಮಾತುಕತೆ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧವೇ ಎಲ್ಲರೂ ಭೇಟಿಯಾಗಿರುವ ಬಗ್ಗೆ ಗುಸು ಗುಸು ಹಬ್ಬಿದೆ. ಈ ಸಂಬಂಧ ಶೀಘ್ರದಲ್ಲಿಯೇ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಗಳಿವೆ. ಕೆಜಿಎಫ್ ಚಾಪ್ಟರ್-1 ರಿಲೀಸ್ ಬಳಿಕ ಪ್ರಶಾಂತ್ ನೀಲ್ ಹೆಸರು ಎಲ್ಲ ಸಿನಿ ಅಂಗಳದಲ್ಲಿ ಫೇಮಸ್ ಆಗಿದೆ. ಮುಂದಿನ ವರ್ಷ ಕೆಜಿಎಫ್ ಚಾಪ್ಟರ್-2 ರಿಲೀಸ್ ಆಗಲಿದೆ. ಈ ನಡುವೆ ಯಂಗ್ ಬಾಹುಬಲಿ ಪ್ರಭಾಸ್ ನಟಿಸುತ್ತಿರುವ ಸಲಾರ್ ಚಿತ್ರಕ್ಕೆ ಪ್ರಶಾಂತ್ ನೀಲ್ ಆಯಕ್ಷನ್ ಕಟ್ ಹೇಳುತ್ತಿದ್ದಾರೆ.