ಸೌತ್ ಇಂಡಿಯನ್ ಡ್ರೀಮ್ ಹುಡುಗಿ ಸಾಯಿ ಪಲ್ಲವಿ..,ಈಗ ಮಂಸೋರೆಯ ಕನ್ನಡ ಸಿನಿಮಾದಲ್ಲಿ
ಸ್ಯಾಂಡಲ್ ವುಡ್ ನ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರು ಮತ್ತೊಂದು ಹೊಸ ಚಿತ್ರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ, ಹೊಸ ಚಿತ್ರದಲ್ಲಿ ಸೌತ್ ಇಂಡಿಯನ್ ಸ್ಟಾರ್ ನಟಿ ಸಾಯಿ ಪಲ್ಲವಿ ನಟಿಸುವುದು ಬಹುತೇಕ ಕಚಿತವಾಗಿದೆ.

ಸಾಯಿ ಪಲ್ಲವಿ ಸಖತ್ ಚ್ಯೂಸಿ ಅಂತಲೇ ಫೇಮಸ್. ಈಕೆಗೆ ಮನಸೋತ ಹುಡುಗರು ಸಾವಿರಾರಲ್ಲ, ಲಕ್ಷ, ಕೋಟಿಯ ಹತ್ತಿರತ್ತಿರ ಇದ್ದಾರೆ. ಇಂಥಾ ಮೊಡವೆ ಕೆನ್ನೆಯ ಹುಡುಗಿ ಈಗ ಕನ್ನಡಕ್ಕೂ ಬರ್ತಿದ್ದಾಳೆ ಅಂದ್ರೆ ಕನ್ನಡ ಹುಡುಗ್ರು ಥ್ರಿಲ್ಲಾಗದೇ ಇರ್ತಾರಾ.. ಅಷ್ಟಕ್ಕೂ ಈ ರೌಡಿ ಬೇಬಿಯನ್ನು ಕನ್ನಡಕ್ಕೆ ಕರೆತರೋದು ಯಾರು, ಯಾವ ಸಿನಿಮಾದಲ್ಲಿ ಈ ಪ್ರೆಟಿ ಗರ್ಲ್ ಮಿಂಚಲಿದ್ದಾರೆ ಅನ್ನೋದರ ಬಗೆ ಹಲವರಲ್ಲಿ ಕುತೂಹಲವಿದೆ. ಆ ಕುತೂಹಲ ತಣಿಸೋ ಪ್ರಯತ್ನವಿದು.

ಅಖಿಲಾ ಜೊತೆ ಮಂಸೋರೆ ವಿವಾಹ

ಈಗಾಗಲೇ ಸೂಕ್ಷ್ಮ ವಿಚಾರಗಳನ್ನಿಟ್ಟು ಸಿನಿಮಾ ಮಾಡಿರುವ ಮಂಸೋರೆ ಈ ಸಿನಿಮಾದ ಮೂಲಕ ದಕ್ಷಿಣ ಭಾರತದ ಗಮನ ಸೆಳೆಯಬಹುದು. ಅವರ ಚಿತ್ರಕ್ಕೆ ಸಾಯಿ ಪಲ್ಲವಿಯಂಥಾ ನಟಿ ಜೊತೆಗೂಡಿದರೆ ಸಿನಿಮಾದ ರೇಂಜೇ ಬದಲಾಗಬಹುದು. ಇದರ ನಡುವೆ ಆಕ್ಟ್ 1978 ರ ತೆಲುಗು ಮತ್ತು ಹಿಂದಿ ರೀಮೇಕ್ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ. ಇಂಥಾ ಸಕ್ಸಸ್ ನಡುವೆ ಇರುವ ಮಂಸೋರೆ ಆದಷ್ಟು ಬೇಗ ಸಾಯಿ ಪಲ್ಲವಿ ಅವರ ಜೊತೆಗೆ ಹೊಸ ಸಿನಿಮಾದೊಂದಿಗೆ ಬರಲಿ ಎಂಬುದು ಕನ್ನಡಿಗರ ಆಶಯ. ಬೆಂಗಳೂರಿನ ಕನಕಪುರ ರಸ್ತೆಯ ತಲಘಟ್ಟಪುರ ಬಳಿ ಇರುವ ಶಿಬ್ರಾವ್ಯಿ ಕೋರ್ಟ್ ಯಾರ್ಡ್‌ನಲ್ಲಿ ಗೆಳತಿ ಅಖಿಲಾ ಜೊತೆ ಮಂಸೋರೆ ವೈವಾಹಿಕ ಜೀವನಕ್ಕೆ (ಆಗಸ್ಟ್ 15) ಕಾಲಿಟ್ಟಿದ್ದರು. ಕನ್ನಡ ಚಿತ್ರರಂಗದ ಕೆಲವೇ ಕೆಲವು ಕಲಾವಿದರು, ನಿರ್ದೇಶಕರು ಮಂಸೋರೆ ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಕೋರಿದ್ದರು.
****