News

ಸೇನಾಪುರ ಕ್ಕೆ ನಾಯಕಿ ಅನನ್ಯ ಭಟ್..!

ಸೇನಾಪುರ ಕ್ಕೆ ನಾಯಕಿ ಅನನ್ಯ ಭಟ್..!
  • PublishedSeptember 25, 2021

ಮಹಿಳಾ ಪ್ರಧಾನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಅನನ್ಯ ಭಟ್  ಚಿತ್ರದ ಹೆಸರು ‘ಸೋನಾಪುರ’ ಕನ್ನಡ ಚಿತ್ರ ರಂಗದ ಖ್ಯಾತ ಗಾಯಕಿಯೂ ಆಗಿರುವ ಅನನ್ಯ ಭಟ್ ಕೆಜಿಎಫ್ ಚಿತ್ರದ ಜೊತೆ ಜೊತೆಗೆ ಬೇರೆ ಬೇರೆ ಭಾಷೆಗಳಲ್ಲಿಯೂ ಹಾಡಿದ್ದಾರೆ. ಇದೀಗ ಸೇನಾಪುರ ಎಂಬ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಂಗಭೂಮಿ ಹಿನ್ನಲೆಯಿರುವ ಅನನ್ಯಾ ಭಟ್, ಇದೇ ಮೊದಲ ಬಾರಿ ಮಹಿಳಾ ಪ್ರಧಾನ ಕಥೆ ಇರುವ ಸಿನಿಮಾದಲ್ಲಿ ಮುಖ್ಯ ಪಾತ್ರವನ್ನು ನಿಭಾಯಿಸಿದ್ದಾರೆ. ಬರೀ ನಟನೆ ಮಾತ್ರವಲ್ಲ, ಈ ಸಿನಿಮಾದ ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸುವ ಹೊಣೆಯನ್ನು ಸಹ ಅವರು ಹೊತ್ತುಕೊಂಡಿದ್ದಾರೆ. ‘ಟೀಸರ್‌ನಲ್ಲಿ ಹಿನ್ನಲೆ ಧ್ವನಿ ನೀಡಿದ್ದು ಛಾಲೆಂಜಿಂಗ್ ಆಗಿತ್ತು. ನಾನು ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ನಾನು ರಂಗಭೂಮಿಯಲ್ಲಿ ಕೆಲಸ ಮಾಡಿರುವುದರಿಂದ ನನಗೆ ನಟನೆ ಹೊಸದಲ್ಲ. ಬೆನಕ ತಂಡದಲ್ಲಿ ಈಗಲೂ ನಾನು ನಾಟಕ ಮಾಡುತ್ತೇನೆ’ ಎಂದು ಮಾಹಿತಿ ನೀಡುತ್ತಾರೆ ಅನನ್ಯಾ. ಈ ಮೊದಲು ಅನನ್ಯಾ ‘ಊರ್ವಿ’ ಮತ್ತು ‘ಭೂತಕಾಲ’ ಎಂಬ ಚಿತ್ರಗಳಲ್ಲಿ ನಟಿಸಿದ್ದರು.

ಅಮಿತ್‌ ಕುಮಾರ್ ಮತ್ತು ರಾಹುಲ್‌ ದೇವ್ ಜಂಟಿಯಾಗಿ ವಿಮ್‌ಲಾಜ್ ಎಂಟರ್‌ಟೈನ್‌ಮೆಂಟ್ ಹಾಗೂ ಅಂಸ ಕ್ರಿಯೇಷನ್ಸ್ ಮೂಲಕ ಬಂಡವಾಳ ಹೂಡಿದ್ದಾರೆ. ತಾರಾಗಣದಲ್ಲಿ ದಿನೇಶ್‌ ಮಂಗಳೂರು, ಬಿ.ಎಂ.ಗಿರಿರಾಜ್, ಸಿಂಧೂ, ಶೇಖರ್‌ರಾಜ್, ರೀನಾ, ಅಮೂಲ್ಯ, ಪರಮೇಶ್ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣವನ್ನು ಪ್ರಶಾಂತ್‌ಸಾಗರ್ ಮಾಡಿದ್ದಾರೆ. ಅರ್ಜುನ್ ಸಂಕಲನ ಹಾಗೂ ಪ್ರಮೋದ್‌ ಮರವಂತೆ ಸಾಹಿತ್ಯ ಈ ಚಿತ್ರಕ್ಕಿದೆ.

****

Written By
Kannadapichhar

Leave a Reply

Your email address will not be published. Required fields are marked *