News

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅನ್ನಾತೆ ಚಿತ್ರದ ಟೀಸರ್ ಅಕ್ಟೋಬರ್ 14 ರಂದು ರಿಲೀಸ್..!

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅನ್ನಾತೆ ಚಿತ್ರದ ಟೀಸರ್ ಅಕ್ಟೋಬರ್ 14 ರಂದು ರಿಲೀಸ್..!
  • PublishedOctober 12, 2021

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಶಿವ ನಿರ್ದೇಶನದ ಬಹುನಿರೀಕ್ಷೆಯ ‘ಅನ್ನಾತೆ’ ಚಿತ್ರದ ಟೀಸರ್ ಅಕ್ಟೋಬರ್‌ 14ರಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಸನ್ ಪಿಕ್ಚರ್ಸ್ ಬ್ಯಾನರ್ ನಡಿ ಕಲಾನಿಥಿ ಮಾರನ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಆಕ್ಷನ್‌ ಡ್ರಾಮಾ ಆಧಾರಿತ ಈ ಚಿತ್ರದಲ್ಲಿ ಖುಷ್ಬು, ನಯನತಾರ, ಕೀರ್ತಿ ಸುರೇಶ್, ಪ್ರಕಾಶ್ ರಾಜ್, ಮೀನಾ, ಜಗಪತಿ ಬಾಬು, ಸತೀಶ್ ಸೇರಿದಂತೆ ಹಲವರ ತಾರಬಳಗವಿದೆ. ಡಿ ಇಮ್ಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದಾರೆ. ಈ ಸಿನಿಮಾವನ್ನು ತೆರೆಮೇಲೆ ವೀಕ್ಷಿಸಲು ರಜನಿಕಾಂತ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ

Written By
Kannadapichhar

Leave a Reply

Your email address will not be published. Required fields are marked *