ಸುಮಲತಾ ಬರ್ತ್ ಡೇ ಸೆಲೆಬ್ರೇಷನ್ನಲ್ಲಿ ‘ಜೋಡೆತ್ತು’..!

ಸಂಸದೆ, ಹಿರಿಯ ನಟಿ ಸುಮಲತಾ ಅವರು 59ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಸುಮಲತ ಅವರಿಗೆ ಚಿತ್ರರಂಗದ ಸೆಲಬ್ರೆಟಿಗಳು ವಿಶ್ ಮಾಡಿದ್ದಾರೆ. ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಸ್ನೇಹಿತರು ಕೂಡ ಶುಭಾಶಯ ತಿಳಿಸಿದ್ದಾರೆ.

ಜನುಮ ದಿನವನ್ನು ಗ್ರಾಂಡ್ ಆಗಿ ಸೆಲಬ್ರೇಟ್ ಮಾಡಿಕೊಂಡಿರುವ ಸುಮಲತಾ ಅಂಬರೀಶ್ ಸ್ಯಾಂಡಲ್ ವುಡ್ ನ ಪ್ರಮುಖರಿಗೆ ಮಾತ್ರ ಆಹ್ವಾನ ನೀಡಿದ್ದರು. ಇದೇ ವೇಳೆ ಜೋಡೆತ್ತುಗಳೆಂದೇ ಫೇಮಸ್ ಆಗಿರುವ ದರ್ಶನ್ ಮತ್ತು ಯಶ್ ಭಾಗವಹಿಸಿದ್ದರು.
ಯಶ್ ದರ್ಶನ್ ಗುರುಕಿರಣ್ ಇನ್ನು ಅನೇಕ ಸ್ಯಾಂಡಲ್ ವುಡ್ ನ ಪ್ರಮುಖರು ಸುಮಲತ ಅಂಬರೀಶ್ ಅವರ ಹುಟ್ಟುಹಬ್ಬದ ಸೆಲಬ್ರೇಶನ್ ನಲ್ಲಿ ಭಾಗವಹಿಸಿದ್ದ ಪೋಟೊಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.
****