News

ಸೀಟಿನಂಚಿಗೆ ಕೂರಿಸುವ ‘ವಿಂಡೋಸೀಟ್’ Jazz ಸಾಂಗ್..!

ಸೀಟಿನಂಚಿಗೆ ಕೂರಿಸುವ ‘ವಿಂಡೋಸೀಟ್’ Jazz  ಸಾಂಗ್..!
  • PublishedOctober 27, 2021

ವಿಂಡೋಸೀಟ್  ಶೀತಲ್ ಶೆಟ್ಟಿ ನಿರ್ದೇಶನ ಮಾಡ್ತಿರೋ ಈ ಸಿನಿಮಾದ ಅಪ್ಡೇಟ್ ಆಗಾಗ ನಿಮ್ಗೆಲ್ಲಾ ಸಿಗುತ್ತಲೇ ಇತ್ತು. ಹಾಗಾಗಿಯೇ ಸಿನಿಮಾ ಮೇಲಿನ ಭರವಸೆ-ನಿರೀಕ್ಷೆ ಕೊಂಚ ಹೆಚ್ಚಾಗಿಯೇ ಬೆಳೆಯುತ್ತಾ ಹೋಯ್ತು. ಸಿನಿಮಾ ನೋಡಲೇಬೇಕೆಂಬ ಕಂಟೆಂಟ್ ಕೊಟ್ಟಿರುವ ವಿಂಡೋಸೀಟ್ ಇದೀಗ ಹೊಸದೊಂದು ಹಾಡನ್ನ ರಿಲೀಸ್ ಮಾಡಿದೆ.

ಸರೆಂಡರ್ ಅನ್ನೋ ಹಾಡನ್ನ ಚಿತ್ರತಂಡ ರಿಲೀಸ್ ಮಾಡಿದೆ. ಈ ಹಾಡನ್ನ ನೋಡಿದ್ರೆ ಖಂಡಿತ ಪಡೆ ಹೈಕ್ಳು ಮನಸ್ಸು ಡಿಸ್ಟರ್ಬ್ ಆಗದೆ ಇರದು. ಆ ಮಟ್ಟಿಗಿನ ಮಾದಕತೆ ಹಾಡಿನಲ್ಲಿ ತುಂಬಿದೆ. ಇಂಗ್ಲೀಷ್ ಪದಗಳಲ್ಲೇ ಎಲ್ಲಾ ಹುಡುಗರ ಚಿತ್ತ ಕದ್ದಿದೆ ವಿಂಡೋಸೀಟ್. ಜಾಝ್ ಶೈಲಿಯಲ್ಲಿ ಮೂಡಿಬಂದ ಸರೆಂಡರ್ ಹಾಡು ಅದ್ಭುತವಾಗಿದೆ ಅನ್ನೋದರಲ್ಲಿ ಎರಡೂ ಮಾತಿಲ್ಲ. ನಿಮ್ಗೂ ಅದರ ಅನುಭವ ಆಗ್ಬೇಕು ಅಂದ್ರೆ ಒಮ್ಮೆ ಹಾಡನ್ನ ನೋಡ್ಬಿಡಿ. ಆಗ ನಿಮ್ಮ ಗಮನಕ್ಕೂ ಆ ಅನುಭವ ಬಂದೇ ಬರುತ್ತೆ. ಇನ್ನೊಂದು ವಿಶೇಷ ಅಂದ್ರೆ ಜಾಝ್ ಶೈಲಿಯ ಹಾಡು ಕನ್ನಡದ ಪಾಲಿಗೆ ಇದೇ ಮೊದಲು.

ಮಹೇಶ್ ರಘುನಂದನ್ ಬರೆದಿರೋ ಸಾಹಿತ್ಯಕ್ಕೆ, ಸೌಂದರ್ಯ ಜಯಚಂದ್ರನ್ ಧ್ವನಿ ನೀಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಸಿನಿಮಾದಲ್ಲೂ ಸಂಗೀತದ ಮ್ಯಾಜಿಕ್ ಮಾಡಿದ್ದಾರೆ. ಸಿನಿಮಾಗೆ ಕೆ ಎಸ್ ಕೆ ಶೋ ರೀಲ್ ಬ್ಯಾನರ್ ನಡಿ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ವಿಘ್ನೇಶ್ ರಾಜ್ ಕ್ಯಾಮೆರಾ ಹಿಡಿದಿದ್ದು, ರಿತ್ವಿಕ್ ಸಂಕಲನವಿದೆ.

ನಿರೂಪ್ ಭಂಡಾರಿ ನಾಯಕರಾಗಿದ್ದು, ಅಮೃತಾ ಅಯ್ಯರ್ ಹಾಗೂ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಉಳಿದಂತೆ ಲೇಖಾ ನಾಯ್ಡು, ಮಧುಸೂದನ್ ರಾವ್, ರವಿಶಂಕರ್, ಸೂರಜ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *