ಸಿನಿಮಾ? or ಪೊಲಿಟಿಕ್ಸ್..? ಯಾವುದನ್ನ ಆಯ್ಕೆ ಮಾಡ್ಕೋತಾರೆ ನಿಖಿಲ್ ಕುಮಾರಸ್ವಾಮಿ..!

ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ಅವರು ಸಿನಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ಬಿಟ್ಟುಬಂದು, ಪೂರ್ತಿಯಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಬೇಕು ಎಂದು ಅನೇಕರು ಬಯಸುತ್ತಿದ್ದಾರೆ. ಈ ಬಗ್ಗೆ ನಿಖಿಲ್ ಬಹಿರಂಗವಾಗಿಯೇ ಮಾತನಾಡಿದ್ದಾರೆ.
‘ನಮ್ಮದು ರಾಜಕಾರಣದ ಕುಟುಂಬ. ನಾನು ಚಿತ್ರರಂಗ ಬಿಟ್ಟು ರಾಜಕೀಯದಲ್ಲಿ ತೊಡಗಿಕೊಳ್ಳಬೇಕು ಎಂಬ ಭಾವನೆ ಹಲವು ಜನರಿಲ್ಲಿ ಇರುವುದು ಸತ್ಯ. ಸರವಣ ಅವರು ನನಗೆ ಈ ಮಾತು ಬಹಳ ಸಲ ಹೇಳುತ್ತಿರುತ್ತಾರೆ. ನೀವು ಸಿನಿಮಾ ಮಾಡಿದ್ದು ಸಾಕು ಅಂತ ಹೇಳುತ್ತಾರೆ. ಆದರೆ ನಾನು ರಾಜಕೀಯದಲ್ಲೂ ಸಕ್ರಿಯನಾಗಿದ್ದೇನೆ. ಸದ್ಯಕ್ಕೆ ಒಂದು ಸಿನಿಮಾ ಸಹಿ ಮಾಡಿದ್ದೇನೆ. ಅದನ್ನು ಬಿಡಲು ನನಗೆ ಮನಸ್ಸಾಗುತ್ತಿಲ್ಲ’ ಎಂದು ನಿಖಿಲ್ ಹೇಳಿದ್ದಾರೆ.
ತಮ್ಮ ತಾತ ಹಾಗೂ ತಂದೆಯoತೆಯೇ ರಾಜಕೀಯದಲ್ಲಿ ಬಿಗಿಯಾಗಿ ನೆಲೆಯೂರಬೇಕೆಂಬ ಕನಸು ಹೊತ್ತಿರೋ ಯುವರಾಜ ರೈಡರ್ ಅನ್ನೋ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾ ಅತಿ ಶೀಘ್ರದಲ್ಲೇ ರಿಲೀಸ್ ಆಗ್ತಿದೆ. ಆದ್ರೆ ಈ ನಡುವೆ ನಿಖಿಲ್ ಸದ್ದಿಲ್ಲದೆ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ಅನ್ನೋ ಬಗ್ಗೆ ಅನುಮಾನ ಮೂಡ್ತಿದೆ.
****