ಸಿನಿಮಾ ಶೂಟಿಂಗ್ ವೇಳೆ ‘ನಟ ಪ್ರಕಾಶ್ ರಾಜ್ ‘ ಕೈಗೆ ಗಂಭೀರ ಗಾಯ
ಇಂದು ಚೆನ್ನೈನಲ್ಲಿ ನಟ ಧನುಷ್ ನಾಯಕನಾಗಿ ಅಭಿವನಯಿಸಿರುವಂತ ಚಿತ್ರವೊಂದರ ಸಾಹಸ ಶೂಟಿಂಗ್ ಚಿತ್ರೀಕರಣದ ಸಂದರ್ಭದಲ್ಲಿ ನಟ ಪ್ರಕಾಶ್ ರಾಜ್ ಅವರ ಕೈಗೆ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿರೋ ಘಟನೆ ನಡೆದಿದೆ.
ಆಗಸ್ಟ್ 5ರಂದು ಆರಂಭಗೊಂಡಂತ ನಟ ಧನುಷ್ ನಾಯಕನಾಗಿ ನಟಿಸಿರುವಂತ ಚಿತ್ರವೊಂದರ ಶೂಟಿಂಗ್ ಚೆನ್ನೈನಲ್ಲಿ ನಡೆಯುತ್ತಿತ್ತು. ಈ ಶೂಟಿಂಗ್ ನ ಸಾಹಸ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ನಟ ಪ್ರಕಾಶ್ ರೈ ಕೈಗೆ ಗಂಭೀರವಾಗಿ ಪೆಟ್ಟುಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಚೈನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ವೈದ್ಯರೂ ಶಸ್ತ್ರ ಚಿಕಿತ್ಸೆಗೆ ಸಲಹೆ ಮಾಡಿದ್ದಾರೆ.

ಸಿನಿಮಾ ಶೂಟಿಂಗ್ ವೇಳೆ ‘ನಟ ಪ್ರಕಾಶ್ ರಾಜ್ ‘ ಕೈಗೆ ಗಂಭೀರ ಗಾಯ
ಇದರಿಂದಾಗಿ ನಟ ಪ್ರಕಾಶ್ ರೈ ಚೆನ್ನೈನಿಂದ ಹೈದರಾಬಾದ್ ನಲ್ಲಿರುವಂತ ಅವರ ಗೆಳೆಯ ಡಾ.ಗುರುವರೆಡ್ಡಿ ಅವರ ಬಳಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರೋದಾಗಿ ತಿಳಿದು ಬಂದಿದೆ. ಯಾವುದೇ ಪ್ರಾಣಾಪಾಯವಿಲ್ಲ ಎಂಬುದಾಗಿಯೂ ತಿಳಿದು ಬಂದಿದೆ.
ಈ ಕುರಿತಂತೆ ಟ್ಟಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ನಟ ಪ್ರಕಾಶ್ ರೈ ಅವರು, ಒಂದು ಘಟನೆ ನಡೆದಿದೆ. ಹೀಗಾಗಿ ಶಸ್ತ್ರ ಚಿಕಿತ್ಸೆಗಾಗಿ ಹೈದರಾಬಾದ್ ಗೆ ಬಂದಿದ್ದೇನೆ. ಗೆಳೆಯ ಡಾ.ಗುರುವರೆಡ್ಡಿಯವರು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಯಾವುದೇ ಭಯವಿಲ್ಲ. ಯಾರೂ ಆತಂಕ ಪಡುವುದು ಬೇಡ ಎಂಬುದಾಗಿ ತಿಳಿಸಿದ್ದಾರೆ.
****