News

ಸಿನಿಮಾರಂಗಕ್ಕೆ ಬಂದ ಸಾಯಿ ಪಲ್ಲವಿ ಸಹೋದರಿ ಪೂಜಾ ಕಣ್ಣನ್!

ಸಿನಿಮಾರಂಗಕ್ಕೆ ಬಂದ ಸಾಯಿ ಪಲ್ಲವಿ ಸಹೋದರಿ ಪೂಜಾ ಕಣ್ಣನ್!
  • PublishedNovember 23, 2021

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅದರಲ್ಲೂ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಸಾಯಿ ಪಲ್ಲವಿಗೆ ಸಕತ್ ಡಿಮಾಂಡ್ ಇದ್ದೇ ಇರುತ್ತದೆ. ಅವರು ದೊಡ್ಡ ದೊಡ್ಡ ಸ್ಟಾರ್ ನಟರೊಂಗೆ ಅಭಿನಯಿಸಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಅವರು ಸಖತ್​ ಕಾಳಜಿ ವಹಿಸುತ್ತಾರೆ. ಅತಿಯಾದ ಗ್ಲಾಮರ್​ ಎಂದರೆ ಅವರಿಗೆ ಅಲರ್ಜಿ. ನಟನೆಯ ಮೂಲಕವೇ ಅವರು ಜನರ ಮನ ಗೆದ್ದಿದ್ದಾರೆ. ವಿಶೇಷ ಏನೆಂದರೆ ಈಗ ಅವರ ಸಹೋದರಿ ಪೂಜಾ ಕಣ್ಣನ್​ ಅವರು ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಚಿತ್ತಿರ ಚೆವ್ವಾನಂ’ ರಿಲೀಸ್​ಗೆ ಸಿದ್ಧವಾಗಿದೆ. 

ಈಗ ‘ಚಿತ್ತಿರ ಚೆವ್ವಾನಂ’ ಸಿನಿಮಾದ ಫಸ್ಟ್​ ಲುಕ್ ಮೋಷನ್​ ಪೋಸ್ಟರ್​​ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಖ್ಯಾತ ನಟ-ನಿರ್ದೇಶಕ ಸಮುದ್ರಖಣಿ ಅವರು ಪೂಜಾ ಕಣ್ಣನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ತಂದೆ-ಮಗಳ ಪಾತ್ರದಲ್ಲಿ ಅವರಿಬ್ಬರು ಅಭಿನಯಿಸಿದ್ದಾರೆ. ಸಾಹಸ ನಿರ್ದೇಶಕ ಸ್ಟಂಟ್​ ಸಿಲ್ವಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಾಯಿ ಪಲ್ಲವಿ ಸಹೋದರಿಯ ಈ ಸಿನಿಮಾಗೆ ಎಲ್ಲ ಭಾಷೆಯ ಸ್ಟಾರ್​ ಕಲಾವಿದರಿಂದ ಬೆಂಬಲ ಸಿಗುತ್ತಿದೆ. ಮಾಲಿವುಡ್​ ಸ್ಟಾರ್​ ನಟ ಮೋಹನ್​ಲಾಲ್ ಮತ್ತು ಕಾಲಿವುಡ್​ ನಟ ಧನುಷ್​​​​ ಅವರು ಈ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *