News

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ 12ನೇ ಪುಣ್ಯ ಸ್ಮರಣೆ

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ 12ನೇ ಪುಣ್ಯ ಸ್ಮರಣೆ
  • PublishedDecember 30, 2021

ಸಾಹಸಿಂಹ ವಿಷ್ಣುವರ್ಧನ್ ಮರೆಯಾಗಿ 12 ವರ್ಷಗಳು ಕಳೆದಿವೆ. ಇಂದು ಅವರ ಪುಣ್ಯ ಸ್ಮರಣೆ. ಅಭಿಮಾನಿಗಳು ವಿಷ್ಣುದಾದಾನನ್ನು ಸ್ಮರಿಸುತ್ತಿದ್ದಾರೆ. 2009 ಡಿಸೆಂಬರ್ 30 ಕನ್ನಡ ಚಿತ್ರರಂಗದ ಪಾಲಿನ ಕರಾಳದಿನ. ಅದ್ಭುತ ಸಿನಿಮಾಗಳನ್ನು ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಿದ್ದ ವಿಷ್ಣು ದಾದಾ ಮರೆಯಾದ ದಿನವಿದು. 12 ವರ್ಷಗಳ ಹಿಂದೆ ಇದೇ ದಿನ ಇಡೀ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅನಾಥಮಾಡಿ, ವಿಷ್ಣುದಾದಾ ಬಾರದ ಲೋಕಕ್ಕೆ ಹೊರಟು ಹೋಗಿದ್ದರು.

ಕನ್ನಡ ಚಿತ್ರ ರಂಗಕ್ಕೆ ಡಾ ವಿಷ್ಣುದಾದಾ ಕೊಡುಗೆ ದೊಡ್ಡದು  1972 ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ  ನಾಗರಹಾವು  ಚಿತ್ರದೊಂದಿಗೆ ವಿಷ್ಣುವರ್ಧನ ಎಂಬ ನಟನ ಉದಯವಾಯಿತು. 29.12.1972 ರಂದು ತೆರೆಕಂಡ ಈ ಸಿನೆಮಾ, ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾದ ಚಿತ್ರ, ಆಗಿನ ಕಾಲಕ್ಕೇ 7 ಲಕ್ಶ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು. ರಾಶ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಷ್ಣು ನಟಿಸಿದ್ದ ‘ ಸಾಹಸಸಿಂಹ ’ ಸಿನೆಮಾ 25 ವಾರಗಳನ್ನು ಪೂರೈಸಿತು. ಇಲ್ಲಿಂದ ಮುಂದೆ ವಿಷ್ಣು ಸಾಹಸಸಿಂಹ ಎಂದು ಹೆಸರುವಾಸಿಯಾದರು.ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ ‘ಸಾಹಸಸಿಂಹ’ ಎಂಬ ಬಿರುದು ಬಂದಿತ್ತು.

****

Written By
Kannadapichhar

Leave a Reply

Your email address will not be published. Required fields are marked *