News

ಸಲಗ ಕೋಟಿಗೊಬ್ಬನ‌ ನಡುವೆ ನಿನ್ನ ಸನಿಹಕೆ ಹೌಸ್ ಫುಲ್

ಸಲಗ ಕೋಟಿಗೊಬ್ಬನ‌ ನಡುವೆ ನಿನ್ನ ಸನಿಹಕೆ ಹೌಸ್ ಫುಲ್
  • PublishedOctober 19, 2021

ಕೋವಿಡ್ ವಿಲಕ್ಷಣದಿಂದಾಗಿ ವಿಚಲಿತವಾಗಿದ್ದ ಕನ್ನಡ ಚಿತ್ರರಂಗದ ಮತ್ತೆ ಹಳೆ ಟ್ರ್ಯಾಕ್ ಗೆ ಮರಳುತ್ತಿದೆ. ಕಳೆದ 15 ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳೆ ಇದಕ್ಕೆ ಸಾಕ್ಷಿ. ಅಕ್ಟೋಬರ್ 8 ರಂದು ಬಿಡುಗಡೆಯಾದ ನಿನ್ನ ಸನಿಹಕೆ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವೀಯಾಗಿದೆ. ಎರಡನೇ ವಾರಕ್ಕೆ ತನ್ನ ಶೋ ಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವೀಯಾಗಿದೆ.

ಕಳೆದವಾರ ಬಿಡುಗಡೆ ಆದ ಸಲಗ ಮತ್ತು ಕೋಟಿಗೊಬ್ಬ 3 ಸಿನಿಮಾ ದ ಅಬ್ಬರದ ನಡುವೆಯೂ ನಿನ್ನ ಸನಿಹಕೆ ಸಿನಿಮಾ ಸೈಲೆಂಟಾಗಿಯೇ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನಿನ್ನ ಸನಿಹಕೆ ಚಿತ್ರ ಬೇಡಿಕೆ ಹೆಚ್ಚಿಸಿಕೊಂಡಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ ದಲ್ಲಿ ಫುಲ್ ಹೌಸ್ ಪ್ರದರ್ಶನ ಕೂಡ ಕಾಣುತ್ತಿದೆ.

ಇದರಿಂದ ಉತ್ತೇಜನಗೊಂಡಿರುವ ಕೆ.ಆರ್.ಜಿ ಸ್ಟುಡಿಯೋಸ್ ಬರೋಬರಿ 15 ಶೋಗಳನ್ನು ಹೆಚ್ಚಿಸಿದೆ. ದೊಡ್ಡ ದೊಡ್ಡ ಸ್ಟಾರ್ ನಟರ ಬಿಗ್ ಬಜೆಟ್ ಚಿತ್ರಗಳಗೆ ಪೈಪೋಟಿ ನೀಡುತ್ತಿರುವ ನಿನ್ನ ಸನಿಹಕೆ ಚಿತ್ರ ಪ್ರೇಕ್ಷಕ ಮತ್ತು ವಿಮರ್ಶಕರಿಂದ ಭಾರಿ ಮೆಚ್ಚುಗೆ ಪಡೆದಿದೆ ದೊಡ್ಡ ಚಿತ್ರಗಳ‌ ಆಗಮನದಿಂದ ಥಿಯೇಟರ್ ಮತ್ತು ಸ್ಕ್ರೀನ್ಸ್ ಸಮಸ್ಯೆ ಎದುರಿಸಿದ್ದ ಚಿತ್ರತಂಡ. ಇದೀಗ ಪ್ರೇಕ್ಷಕರ ಒತ್ತಾಯ ನೋಡಿ‌ ತೆರೆ ಹೆಚ್ಚಿಸಲು ಮುಂದಾಗ್ತಿದ್ದಾರೆ ವಿತರಕರು.

****

Written By
Kannadapichhar

Leave a Reply

Your email address will not be published. Required fields are marked *