ಸಮಂತಾ, ನಾಗ ಚೈತನ್ಯ ದಾಂಪತ್ಯ ಸಂಬಂಧ ಅಂತ್ಯದ ಬಗ್ಗೆ ಸಮಂತಾ ತಂದೆ ಹೇಳಿದ್ದೇನು?

ಸಮಂತಾ ಮತ್ತು ನಾಗ ಚೈತನ್ಯ ಅವರ ದಾಂಪತ್ಯ ವಿಚ್ಛೇದನ ಮೂಲಕ ಅಂತ್ಯಗೊಂಡಿದ್ದು ಸಮಂತಾ ಅವರ ತಂದೆ ಸಮಂತಾ ಮತ್ತು ಅಳಿಯ ನಾಗ ಚೈತನ್ಯರ ವಿಚ್ಛೇದನದ ಕುರಿತು ಮಾತನಾಡಿದ್ದಾರೆ. ತಮ್ಮ ಮಗಳ ವಿಚ್ಛೇದನದ ಬಗ್ಗೆ ನಟಿ ಸಮಂತಾ ಅವರ ತಂದೆ ಮೌನ ಮುರಿದಿದ್ದಾರೆ. ಮಗಳ ಈ ನಿರ್ಧಾರದಿಂದ ತಮಗಾದ ನೋವನ್ನು ಹೊರಹಾಕಿದ್ದಾರೆ.ಈ ಬಗ್ಗೆ ಮಾತನಾಡಿರುವ ಸಮಂತಾ ತಂದೆ ಜೋಸೆಫ್ ಪ್ರಭು, ಇಬ್ಬರ ನಡುವಿನ ವಿಚ್ಛೇದನದ ವಿಚಾರವಾಗಿ ತಮಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ. ಈ ನಿರ್ಧಾರ ತಮಗೆ ಶಾಕ್ ತಂದರೂ ಸಹ, ತನ್ನ ಮಗಳು ಬಹಳ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದಿದ್ದಾರೆ.
ನಟ ನಾಗಾರ್ಜುನ ಅಕ್ಕಿನೇನಿ ಸಹ ತಮ್ಮ ಮಗ ಹಾಗೂ ಸೊಸೆಯ ವಿಚ್ಛೇದನದ ವಿಚಾರದ ಬಗ್ಗೆ ಮಾತನಾಡಿ, ಈ ಬೆಳವಣಿಗೆ ದುರದೃಷ್ಟಕರವಾಗಿದ್ದು, ಇಬ್ಬರಿಗೂ ದೇವರು ಶಕ್ತಿ ನೀಡಲಿ ಎಂದು ಆಶಿಸಿದ್ದಾರೆ. ಪತಿ – ಪತ್ನಿಯರ ನಡುವೆ ಏನಾಗುತ್ತದೋ ಅದೆಲ್ಲಾ ವೈಯಕ್ತಿಕವಾಗಿದ್ದು, ಅದು ಹಾಗೇ ಇರಬೇಕೆಂದ ನಾಗಾರ್ಜುನ, ಏನೇ ಆದರೂ ಇಬ್ಬರೂ ಸಹ ತಮ್ಮ ಪ್ರೀತಿಪಾತ್ರರಾಗೇ ಇರಲಿದ್ದಾರೆ ಎಂದಿದ್ದಾರೆ.
****