ಸನ್ ಆಫ್ ಸತ್ಯಮೂರ್ತಿ ನಂತರ ಮತ್ತೊಂದು ಟಾಲಿವುಡ್ ಸಿನಿಮಾದಲ್ಲಿ ಉಪ್ಪಿ

ಸದ್ಯ ಉಪೇಂದ್ರ ಏಕಕಾಲಕ್ಕೆ ಕನ್ನಡ ಐದಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ನಿಂದ ತೆಲುಗು ಸಿನಿಮಾವೊಂದರಲ್ಲಿ ಉಪ್ಪಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಇತ್ತು ಈಗ ಅದು ಅಧಿಕೃತವಾಗಿದೆ.
‘ರಿಯಲ್ ಸ್ಟಾರ್’ ಉಪೇಂದ್ರ ಕನ್ನಡದಲ್ಲಿ ಹೆಸರು ಮಾಡಿದಂತೆ ತೆಲುಗಿನಲ್ಲೂ ಫೇಮಸ್ ಆಗಿದ್ದಾರೆ. ಅವರ ಎಷ್ಟೋ ಸಿನಿಮಾಗಳು ತೆಲುಗಿಗೆ ಡಬ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿವೆ. ಬರೀ ನಟನೆ ಮಾತ್ರವಲ್ಲದೆ, ತೆಲುಗಿನಲ್ಲೂ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದೀಗ ಅವರು ಮತ್ತೊಮ್ಮೆ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಈ ಬಾರಿ ಅವರೊಂದಿಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ಪಾದಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾಕ್ಕೆ ಈಗ ಟೈಟಲ್ ಫಿಕ್ಸ್ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಗದ್ದಲಕೊಂಡ ಗಣೇಶ್’ ಸಿನಿಮಾದ ನಂತರ ಕ್ರೀಡೆಯನ್ನು ಆಧರಿಸಿ ಟಾಲಿವುಡ್ ನಟ ವರುಣ್ ತೇಜ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೆ ಈ ಹಿಂದೆ ‘ಬಾಕ್ಸರ್’ ಅನ್ನೋ ಟೈಟಲ್ ಇಡಲಾಗುತ್ತಿದೆ ಎಂಬ ಮಾಹಿತಿ ಇತ್ತು. ಇದೀಗ ಅದು ಸುಳ್ಳಾಗಿದೆ. ಅಧಿಕೃತವಾಗಿ ‘ಗನಿ’ ಎಂದು ನಾಮಕರಣ ಮಾಡಲಾಗಿದೆ. ವರುಣ್ ನಟನೆಯ 10ನೇ ಸಿನಿಮಾ ಇದಾಗಿದ್ದು, ಇದರಲ್ಲಿ ಉಪೇಂದ್ರಗೆ ಒಂದು ಮಹತ್ವದ ರೋಲ್ ಇದೆ. ಜೊತೆಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಜಗಪತಿ ಬಾಬು ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ನಾಯಕಿಯಾಗಿ ‘ದಬಂಗ್ 3’ ಖ್ಯಾತಿಯ ಸಾಯಿ ಮಾಂಜ್ರೇಕರ್ ಬಣ್ಣ ಹಚ್ಚಲಿದ್ದಾರೆ.
****