News

ಸಂತೋಷ್ ಆನಂದ್ ರಾಮ್ ಮನೆಗೆ ಬಂತು ಗಿಫ್ಟ್

ಸಂತೋಷ್ ಆನಂದ್ ರಾಮ್ ಮನೆಗೆ ಬಂತು ಗಿಫ್ಟ್
  • PublishedDecember 7, 2021

ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗಿರುವ ಪೇಂಟಿಂಗ್‍ವೊಂದನ್ನು ಸಂತೋಷ್ ಆನಂದ್ ರಾಮ್ ತಮ್ಮ ಮನೆಯಲ್ಲಿ ಹಾಕಿಕೊಂಡಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪುನೀತ್ ಅಗಲಿ ದಿನಗಳೇ ಕಳೆಯುತ್ತಿದ್ದರು, ಅವರ ನೆನಪು ಮಾತ್ರ ಇನ್ನೂ ಜೀವಂತವಾಗಿಯೇ ಇದೆ. ಅಪ್ಪು ಅಗಲಿಕೆಯ ನೋವಿನಿಂದ ಅಭಿಮಾನಿಗಳಿಗೆ ಇಂದಿಗೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಎಷ್ಟೋ ಅಭಿಮಾನಿಗಳು ಪುನೀತ್ ಅವರನ್ನು ತಮ್ಮ ಹೃದಯದಲ್ಲಿಟ್ಟುಕೊಂಡು ಪೂಜಿಸುತ್ತಿದ್ದಾರೆ.

ಅಪ್ಪು ಅಭಿನಯಿಸಿದ್ದ ಹಲವಾರು ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ಕೊಳ್ಳೆ ಹೊಡೆಯುವುದರ ಮೂಲಕ ಹಲವಾರು ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಭದ್ರವಾಗಿ ನೆಲೆಯುರಲು ಸಹಾಯಕವಾಯಿತು. ಅಷ್ಟೇ ಅಲ್ಲದೇ ತಮ್ಮ ಬ್ಯಾನರ್‌ನಲ್ಲಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಲು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಹೀಗೆ ಬದುಕಿದ್ದಾಗ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದ ಅಪ್ಪು ಅವರ ಅನೇಕ ಉತ್ತಮ ಕೆಲಸಗಳು ನಮ್ಮೊಂದಿಗಿದೆ. 

ಸದ್ಯ ಅಭಿಮಾನಿಯೊಬ್ಬರು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಪುನೀತ್ ಜೊತೆಗಿರುವ ಪೇಂಟಿಂಗ್‍ವೊಂದನ್ನು ನೀಡಿದ್ದರು. ಇದೀಗ ಈ ಪೇಂಟಿಂಗ್ ಅನ್ನು ಸಂತೋಷ್ ಆನಂದ್ ರಾಮ್ ಅವರು ತಮ್ಮ ಮನೆಗೆ ಗೋಡೆ ಮೇಲೆ ಹಾಕಿಕೊಂಡು ಅಪ್ಪು ಅವರನ್ನು ಆರಾಧಿಸುತ್ತಿದ್ದಾರೆ. ಇನ್ನೂ ಈ ಫೋಟೋವನ್ನು ಸಂತೋಷ್ ಆನಂದ್ ರಾಮ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಫೋಟೋ ಜೊತೆಗೆ ಹೊಸಬೆಳಕೊಂದು ಹೊಸಿಲಿಗೆ ಬಂದು ಬೆಳಗಿದೆ ಮನೆಯ ಮನಗಳ ಇಂದು ಆರಾಧಿಸೊ ರಾರಾಜಿಸೊ ರಾಜರತ್ನನು ಎಂಬ ಸಾಲುಗಳನ್ನು ಕ್ಯಾಪ್ಷನ್‍ನಲ್ಲಿ ಹಾಕಿ, ಪುನೀತ್ ಎಲ್ಲರ ಮನೆಯಲ್ಲೂ ಸದಾ ಬೆಳಗುತ್ತಿರುತ್ತಾರೆ ಎಂದು ಬರೆದುಕೊಂಡಿದ್ದಾರೆ. 

2017ರಲ್ಲಿ ತೆರೆಕಂಡ ಪುನೀತ್ ರಾಜ್‍ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ರಾಮ್ ಕಾಂಬಿನೇಷನ್‍ನ ರಾಜಕುಮಾರ ಸಿನಿಮಾ ಕನ್ನಡಿಗರ ಮನ ಗೆದ್ದಿತ್ತು. ಇನ್ನೂ ಈ ಸಿನಿಮಾದ ಬೊಂಬೆ ಹೇಳುತೈತೆ ಸಾಂಗ್ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರ ಫೇವರೆಟ್ ಸಾಂಗ್ ಆಗಿತ್ತು. ನಂತರ ಮತ್ತೆ ಇಬ್ಬರಿಬ್ಬರ ಕಾಂಬೀನೇಷನ್‍ನಲ್ಲಿ ಮೂಡಿ ಬಂದ ಯುವರತ್ನ ಸಿನಿಮಾ ಕೂಡ ಪ್ರೇಕ್ಷಕರ ಗಮನ ಸೆಳೆದಿತ್ತು.

****

Written By
Kannadapichhar

Leave a Reply

Your email address will not be published. Required fields are marked *