News

ಶಿವಣ್ಣನ ಕಮಾಂಡರ್ ಗೆಟಪ್ ನೋಡಿ ಫಿದಾ ಆದ ಫ್ಯಾನ್ಸ್..!

ಶಿವಣ್ಣನ ಕಮಾಂಡರ್ ಗೆಟಪ್ ನೋಡಿ ಫಿದಾ ಆದ ಫ್ಯಾನ್ಸ್..!
  • PublishedOctober 16, 2021

ಶಿವರಾಜ್​ಕುಮಾರ್​ ಅವರು ಸಿನಿಮಾದಿಂದ ಸಿನಿಮಾಗೆ ಭಿನ್ನ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗ ಅವರು ನೀ ಸಿಗೋವರೆಗೂಚಿತ್ರಕ್ಕಾಗಿ ಸೇನಾಧಿಕಾರಿಯ ಅವತಾರ ತಾಳಿದ್ದಾರೆ. ದಸರಾ ಹಬ್ಬದ ನಿಮಿತ್ತ ಈ ಲುಕ್​ ರಿಲೀಸ್​ ಆಗಿದೆ. ಇದನ್ನು​ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

‘ನೀ ಸಿಗೋವರೆಗೂ’ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಚಿತ್ರಕ್ಕೆ ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರು, ಜಮ್ಮು ಮತ್ತು ಕಾಶ್ಮೀರ ಹಾಗೂ ಅಮೆರಿಕ ಮುಂತಾದ ಕಡೆ ಶೂಟಿಂಗ್​ ನಡೆಯಲಿದೆ ಅನ್ನೋದು ವಿಶೇಷ.

ಶಿವರಾಜ್​ಕುಮಾರ್ ಈ ಚಿತ್ರದಲ್ಲಿ ಸೇನಾ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಾಮ್ ಧೂಲಿಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಮೆರ್ಹಿನ್ ಫಿರ್ಜಾದ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಜರ್, ಸಾಧುಕೋಕಿಲ, ಸಂಪತ್ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

****

Written By
Kannadapichhar

Leave a Reply

Your email address will not be published. Required fields are marked *