News

ಶಂಕರ್ ನಾಗ್ ನೆನಪು..!

ಶಂಕರ್ ನಾಗ್ ನೆನಪು..!
  • PublishedSeptember 30, 2021

1990 ಸೆಪ್ಟೆಂಬರ್ 30 ದಾವಣಗೆರೆಯ ಆನಗೋಡು ಬಳಿ ನಡೆದ ಕಾರು ಅಪಘಾತದಲ್ಲಿ ಕನ್ನಡ ಚಿತ್ರ ರಂಗದ ಧ್ರವತಾರೆ ಕರಾಟೆ ಕಿಂಗ್ ಶಂಕರ್ ನಾಗ್ ಮೃತರಾಗಿ ಇಂದಿಗೆ 31 ವರುಷಗಳು ಕಳೆದಿವೆ. ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ಸಮಯದಲ್ಲಿ ನಡೆದ ಈ ದುರ್ಘಟನೆಯಿಂದ ಇಡೀ ಕರುನಾಡೇ ಆಘಾತಕ್ಕೆ ಒಳಗಾಗಿತ್ತು. ಇನ್ನು 36 ವರ್ಷದ ಅಪ್ರತಿಮ ಕಲಾವಿದನನ್ನು ಕಳೆದುಕೊಂಡ ಭಾರತೀಯ ಚಿತ್ರರಂಗ ಕಣ್ಣೀರು ಹಾಕಿತು.

ಶಂಕರ್ ನಾಗ್ ಹೆಸರು ಕೇಳಿದರೆ ಸಾಕು ಎಂಥವರಿಗೂ ಮೈ ರೋಮಾಂಚನವಾಗುತ್ತದೆ. ಕನ್ನಡ ಚಿತ್ರ ರಂಗದಲ್ಲಿ ಅಪರೂಪದ ವ್ಯಕ್ತಿತ್ವವುಳ್ಳವರು. ಶಂಕರ್ ನಾಗ್ ಬದುಕಿದ್ದು ಕಡಿಮೆ ವರ್ಷವಾದರೂ ಅವರ ಸಾಧನೆ ಮಾತ್ರ ಚಿರಸ್ಮರಣೀಯ. ಶಂಕರ್‌ನಾಗ್ ಬದುಕಿದ್ದು 36 ವರ್ಷ, ಆದರೆ ಅವರ ಸಾಧನೆ ಇಂದಿಗೂ ಅಮರ. 12 ವರ್ಷಗಳಲ್ಲಿ ಶಂಕರ್​ನಾಗ್​, ಬರೋಬ್ಬರಿ 98 ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿ 90 ಸಿನಿಮಾಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *