ವೈರಲ್ ಆಗ್ತಿದೆ ಪಿ.ವಿ.ಸಿಂಧು-ದೀಪಿಕಾ ಆಟದ ಫೋಟೋಸ್..!

ದೀಪಿಕಾ ಪಡುಕೋಣೆ ನಟಿಯಾದರೂ, ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಪುತ್ರಿ ಕೂಡಾ. ಅವರಿಗೂ ಬ್ಯಾಡ್ಮಿಂಟನ್ ನಲ್ಲಿ ಸಹಜವಾಗಿ ಆಸಕ್ತಿಯಿದೆ. ಈಗ ಗೆಳತಿ ಸಿಂಧು, ಜೊತೆ ಬಿಡುವಿನ ವೇಳೆ ಬ್ಯಾಡ್ಮಿಂಟನ್ ಆಡಿರುವ ದೀಪಿಕಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿನ್ನ ಜೊತೆ ಕ್ಯಾಲೊರಿ ಬರ್ನ್ ಆಯ್ತು ಎಂದು ದೀಪಿಕಾ ಸಿಂಧುಗೆ ಕಿಚಾಯಿಸಿದ್ದಾರೆ.
ಸ್ವಲ್ಪ ದಿನಗಳ ಹಿಂದೆ ದೀಪಿಕಾ ತಮ್ಮ ಪತಿ ರಣವೀರ್ ಅವರೊಡನೆ ಸಿಂಧು ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದ ಚಿತ್ರಗಳು ವೈರಲ್ ಆಗಿದ್ದವು. ಚಿತ್ರಗಳನ್ನು ಹಂಚಿಕೊಂಡಿದ್ದ ರಣವೀರ್ ಸಿಂಗ್ ‘ಸ್ಮಾಷಿಂಗ್ ಟೈಮ್’ ಎಂದು ಬರೆದುಕೊಂಡಿದ್ದರು. ಅದೇ ಚಿತ್ರಗಳನ್ನು ಹಂಚಿಕೊಂಡಿದ್ದ ಪಿವಿ ಸಿಂಧು, ‘ಈ ಭೇಟಿಯನ್ನು ನಾವೆಷ್ಟು ಎಂಜಾಯ್ ಮಾಡಿದ್ದೇವೆಂದು, ನಮ್ಮ ಮುಖದಲ್ಲಿರುವ ನಗುವೇ ಹೇಳುತ್ತದೆ’ ಎಂದು ಬರೆದುಕೊಂಡಿದ್ದರು.
ದೀಪಿಕಾ ಪಡುಕೋಣೆ ಹಾಗೂ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಜೊತೆಯಾಗಿ ಬ್ಯಾಡ್ಮಿಂಟನ್ ಆಡಿರುವುದು ಅಭಿಮಾನಿಗಳ ಕುತೂಹಲ ಕೆರಳಿಸಿದೆ.
****