News

ವಿಶಿಷ್ಟ ಪಾತ್ರದಲ್ಲಿ ವಸಿಷ್ಠ ಸಿಂಹ:ಹುಟ್ಟುಹಬ್ಬದಂದು ಹೊಸ ಸಿನಿಮಾದ ಪಾತ್ರ ರಿವೀಲ್

ವಿಶಿಷ್ಟ ಪಾತ್ರದಲ್ಲಿ ವಸಿಷ್ಠ ಸಿಂಹ:ಹುಟ್ಟುಹಬ್ಬದಂದು ಹೊಸ ಸಿನಿಮಾದ ಪಾತ್ರ ರಿವೀಲ್
  • PublishedOctober 19, 2021

ಕೊರೋನಾ ಸೋಂಕಿನ ಹಾವಳಿಯಿಂದ ತತ್ತರಿಸಿದ್ದ ಸ್ಯಾಂಡಲ್ವುಡ್ ಇದೀಗ ಚೇತರಿಕೆ ಕಂಡಿದೆ. ಇದರ ಬೆನ್ನಲ್ಲೇ ಸಾಲು-ಸಾಲು ಸಿನಿಮಾಗಳು ಥಿಯೇಟರ್ಗೆ ಕಾಲಿಟ್ಟರೆ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ. ಕರ್ನಾಟಕದಾದ್ಯಂತ ಸಿನಿಮಾಗಳ ಚಿತ್ರೀಕರಣ ಜೋರಾಗಿದೆ. ಇಂದು ಚಂದನವನದ ಯುವ ನಟ ವಸಿಷ್ಠ ಸಿಂಹ ಅವರ ಹುಟ್ಟುಹಬ್ಬ ಕ್ಕೆ ಅಭಿಮಾನಿಗಳು ಮತ್ತು ಸ್ಯಾಂಡಲ್ ವುಡ್ ನ ಸಿನಿ ತಾರೆಯರು ಶುಭಾಶಯ ಕೊರಿದ್ದಾರೆ.

ಈ ಸಂದರ್ಭದಲ್ಲಿ ಕನ್ನಡದ ಯುವ ನಟರುಗಳಲ್ಲಿ ಒಬ್ಬರಾದ ವಸಿಷ್ಠ ಸಿಂಹ ಅವರು ವಿಭಿನ್ನ ರೀತಿಯ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಹೌದು ಅವರು ‘ತಲ್ವಾರ್ ಪೇಟೆ’ ಎಂಬ ಚಿತ್ರದಲ್ಲಿ ವಿಶಿಷ್ಟವಾದ ಪಾತ್ರವೊಂದನ್ನು ಮಾಡುತ್ತಿದ್ದಾರೆ. ನಾಗಬ್ರಹ್ಮ ಕ್ರಿಯೇಶನ್ಸ್ ಬ್ಯಾನರ್ ನಿಂದ ಡಾ. ಶೈಲೇಶ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

ತನ್ನ ಕಂಠ ಹಾಗೂ ಸಹಜವಾದ ನಟನೆಯ ಮೂಲಕ ಚಿತ್ರರಂಗದಲ್ಲಿ ತನ್ನದೆ ಸ್ಥಾನ ಗಿಟ್ಟಿಸಿಕೊಂಡಿರುವ ವಸಿಷ್ಠ ಸಿಂಹ ನಾಯಕ ಹಾಗೂ ಖಳನಾಯಕ ಎರಡು ಬಗೆಯ ಪಾತ್ರಗಳ ನಿರ್ವಹಣೆಯಲ್ಲಿ ನಟನೆಯ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನೂ ‘ತಲ್ವರ್ ಪೇಟೆಯಲ್ಲಿ ವಸಿಷ್ಟ ಸಿಂಹ ಅವರ ಪಾತ್ರದ ಕುರಿತು ಶೈಲೇಶ್ ಕುಮಾರ್ ಮಾತನಾಡಿದ್ದು, ವಶಿಷ್ಠ ಅವರು ಈ ಸಿನಿಮಾದಲ್ಲಿ ವಿಶಿಷ್ಟವಾದ ನಾಯಕನ ಪಾತ್ರದಲ್ಲಿ ಮಿಂಚಲಿದ್ದಾರೆ, ಅವರಿಗೆ ನಮ್ಮ ಚಿತ್ರತಂಡದಿಂದ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.

ಹೌದು ಇಂದು ವಸಿಷ್ಠ ಸಿಂಹ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ತಲ್ವಾರ್ ಪೇಟೆಯ ಚಿತ್ರತಂಡ, ಅಭಿಮಾನಿಗಳು ಹಾಗೂ ಸ್ನೇಹಿತರೆಲ್ಲ ವಸಿಷ್ಠ ಸಿಂಹ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಅವರ ಈ ಹೊಸ ಚಿತ್ರ ಒಂದು ಮುಗ್ಧ ಪ್ರೇಮಕಥೆಯನ್ನು ಹೊಂದಿದೆಯಂತೆ. ಲಕ್ಷ್ಮಣ್ ಶ್ರೀರಾಮ್ ಸಹೋದರರ ಜೋಡಿ ಚಿತ್ರ ನಿರ್ದೇಶನ ಮಾಡಿದ್ದು ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನವಿದೆ ನಂದಕುಮಾರ್ ಕ್ಯಾಮೆರಾ ಕೈಚಳಕ ಈ ಚಿತ್ರದಲ್ಲಿರಲಿದೆಯಂತೆ. ಬಹತೇಕ ಚಿತ್ರೀಕರಣವನ್ನು ಕೂಡ ತಂಡ ಮುಗಿಸಿದೆ.

ತಲ್ವಾರ್ ಪೇಟೆಯಲ್ಲಿ ನಾಯಕಿಯಾಗಿ ಸೋನಾಲ್ ಮೊಂಥೆರೊ, ಬಹುಭಾಷಾ ನಟ ರವಿಶಂಕರ್, ಪಂಚ ಭಾಷೆಗಳಲ್ಲಿ ಹೆಸರುಮಾಡಿರುವ ಹರೀಶ್ ಉತ್ತಮನ್, ಆಶಾಲತಾ, ವೀಣಾ ಪೊನ್ನಪ್ಪ, ಸುರೇಶ್ ಚಂದ್ರ, ಮನು, ಯಶ್ ಶೆಟ್ಟಿ ಇತರ ತಾರಾ ಬಳಗವಿದೆ.

****

Written By
Kannadapichhar

Leave a Reply

Your email address will not be published. Required fields are marked *