ವಿನೋದ್ ರಾಜ್ ಸಕತ್ ಡ್ಯಾನ್ಸರ್ ಎಂದ ಶಿವಣ್ಣ..!

ಭಜರಂಗಿ 2’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಅಕ್ಟೋಬರ್ 29ರಂದು ಚಿತ್ರ ತೆರೆಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಿರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ನಟ ಯಶ್ ಹಾಗೂ ಪುನೀತ್ ರಾಜಕುಮಾರ್ ಅತಿಥಿಗಳಾಗಿ ಆಗಮಿಸಿದ್ದರು. ಶಿವರಾಜ್ ಕುಮಾರ್ ಮಾತನಾಡಿ ಕಾರ್ಯಕ್ರಮದ ಖುಷಿಯನ್ನು ಹಂಚಿಕೊಂಡರು, ಇದೇ ವೇಳೆ ಭಜರಂಗಿ 2 ಚಿತ್ರದ ಹಾಡಿಗೆ ಯಶ್,ಅಪ್ಪು, ಶಿವಣ್ಣ ಒಟ್ಟಿಗೆ ಡ್ಯಾನ್ಸ್ ಕೂಡ ಮಾಡಿದ್ರು. ಇದೇ ವೇದಿಕೆಯಲ್ಲಿ ನಟ ವಿನೋದ್ ರಾಜ್ ಅವರ ಡ್ಯಾನ್ಸ್ ಅನ್ನು ಮುಕ್ತವಾಗಿ ಹೊಗಳಿದರು.
ಮೊದಲಿನಿಂದಲೂ ಶಿವ ರಾಜ್‌ಕುಮಾರ್‌ಗೆ ಚಿತ್ರರಂಗದಲ್ಲಿ ಚೆನ್ನಾಗಿ ಡ್ಯಾನ್ಸ್ ಮಾಡುವವರು ಅಂದ್ರೆ ಹೆಚ್ಚಿನ ಪ್ರೀತಿ. ಪುನೀತ್ ಅವರ ಡ್ಯಾನ್ಸ್ ಪರ್ಫಾಮೆನ್ಸ್‌ಗೆ ನಾನು ಯಾವತ್ತು ಫ್ಯಾನ್ ಎಂದಿದ್ದ ಶಿವ ರಾಜ್‌ಕುಮಾರ್, ಈಗ ಈ ವಿಚಾರವನ್ನು ಮತ್ತೆ ಮಾತನಾಡಿದ್ದಾರೆ. ಭಜರಂಗಿ 2 ನ ಟೈಟಲ್ ಟ್ರ್ಯಾಕ್‌ಗೆ ಬೊಂಬಾಟ್ ಆಗಿ ವೇದಿಕೆ ಮೇಲೆ ಕುಣಿದ ಶಿವಣ್ಣ , ಯಶ್ ಮತ್ತು ಪುನೀತ್ ಡ್ಯಾನ್ಸ್ ಮುಗಿದ ನಂತರ ಮೈಕ್ ತೆಗೆದುಕೊಂಡು ಶಿವಣ್ಣ ಮಾತನಾಡಿದ್ದಾರೆ. ನನಗೆ ಡ್ಯಾನ್ಸ್ ಅಂದ್ರೆ ತುಂಬ ಇಷ್ಟ, ಯಶ್ ಕೂಡ ಅದ್ಭುತವಾಗಿ ಡ್ಯಾನ್ಸ್ ಮಾಡ್ತಾರೆ ಅಪ್ಪು ಕೂಡ ಉತ್ತಮ ಡ್ಯಾನ್ಸರ್ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಮಾತು ಮುಂದುವರೆಸಿದ ಅವರು ಹಿಂದೆ ವಿನೋದ್ ರಾಜ್ ಕೂಡ ಅದ್ಭುತ ಡ್ಯಾನ್ಸರ್ ಎಂದಿದ್ದಾರೆ. ಈ ಮೂಲಕ ವಿನೋದ್ ರಾಜ್ ಅವರನ್ನು ಶಿವ ರಾಜ್‌ಕುಮಾರ್ ನೆನಪಿಸಿಕೊಂಡಿದ್ದಾರೆ. ಅವರ ಡ್ಯಾನ್ಸ್ ಶೈಲಿಯ ಬಗ್ಗೆ ಹೊಗಳಿದ್ದಾರೆ. ಹಾಗೇ ನಟ ಶಶಿಕುಮಾರ್ ಕೂಡ ಸಿನಿಮಾಗಳಲ್ಲಿ ಚನ್ನಾಗಿ ಡ್ಯಾನ್ಸ್ ಮಾಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
****