News

ವಾವ್ಹ್ ಎನ್ನುವಂತಿದೆ RRR ಚಿತ್ರದ ಟೀಸರ್..!

ವಾವ್ಹ್ ಎನ್ನುವಂತಿದೆ RRR ಚಿತ್ರದ ಟೀಸರ್..!
  • PublishedNovember 1, 2021

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್​ಆರ್​ಆರ್​’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ಆಲಿಯಾ ಭಟ್​, ಅಜಯ್​ ದೇವಗನ್​ ಮುಖ್ಯಭೂಮಿಕೆ ನಿಭಾಯಿಸಿರುವ ಈ ಸಿನಿಮಾದ ಟೀಸರ್​ ಈಗ ಬಿಡುಗಡೆ ಆಗಿದೆ. ಭಾರತೀಯ ಸಿನಿಮಾ ಜಗತ್ತಿನಲ್ಲಿ ಮಾಂತ್ರಿಕ ಎಂದೇ ಕರೆಸಿಕೊಳ್ಳುವ ನಿರ್ದೇಶಕ ರಾಜಮೌಳಿ ಅವರು ‘ಆರ್​ಆರ್​ಆರ್​’ ಸಿನಿಮಾ ಮೂಲಕ ಮತ್ತೆ ಮೋಡಿ ಮಾಡುವುದು ಖಚಿತ ಎಂಬುದಕ್ಕೆ ಈ ಟೀಸರ್​ ಸಾಕ್ಷಿ ಒದಗಿಸುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟೀಸರ್​ 40 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಈ ಟೀಸರ್​ ಅವಧಿ ಕೇವಲ 45 ಸೆಕೆಂಡ್​​ಗಳು. ಆದರೂ ಕೂಡ ಅದರಲ್ಲಿ ಅದ್ಭುತವನ್ನೇ ತೋರಿಸಿದ್ದಾರೆ ನಿರ್ದೇಶಕ ರಾಜಮೌಳಿ. ಅದ್ದೂರಿ ಸೆಟ್​ಗಳು, ಭರ್ಜರಿ ಆ್ಯಕ್ಷನ್​ ದೃಶ್ಯಗಳು, ಅತ್ಯಾಧುನಿಕ ವಿಎಫ್​ಎಕ್ಸ್​ ಸೇರಿದಂತೆ ಹಲವು ಅಂಶಗಳು ಗಮನ ಸೆಳೆಯುತ್ತಿವೆ. 2022ರ ಜ.7ರಂದು ‘ಆರ್​ಆರ್​ಆರ್​’ ಚಿತ್ರ ವಿಶ್ವಾದ್ಯಂತ ತೆರೆಕಾಣಲಿದೆ. ಟೀಸರ್​ ಹೀಗಿದೆ ಎಂದಮೇಲೆ, ಟ್ರೇಲರ್​ ಹೇಗಿರಬಹುದು ಎಂಬ ಕೌತುಕ ಮೂಡಿದೆ. ಈ ಟೀಸರ್​ನಲ್ಲಿ ಆಲಿಯಾ ಪಾತ್ರ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಟ್ರೇಲರ್​ನಲ್ಲಿ ಅವರ ಪಾತ್ರದ ಬಗ್ಗೆ ಮತ್ತಷ್ಟು ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ.

Written By
Kannadapichhar

Leave a Reply

Your email address will not be published. Required fields are marked *