ಲವ್ ಯ್ಯೂ ರಚ್ಚು ಚಿತ್ರದ ಲಿರಿಕಲ್ ಸಾಂಗ್ ಅಕ್ಟೋಬರ್ 3 ರಂದು ರಿಲೀಸ್..!

ನಟ ಅಜಯ್ ರಾವ್, ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಶಂಕರ್ ಎಸ್ ರಾಜ್ ನಿರ್ದೇಶನದ ‘ಲವ್ ಯ್ಯೂ ರಚ್ಚು’ ಚಿತ್ರದ ಲಿರಿಕಲ್ ಸಾಂಗ್ ವೀಡಿಯೋವನ್ನು ಅಕ್ಟೋಬರ್ 3ರಂದು ಬೆಳಿಗ್ಗೆ 11-00ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ.
‘ನೋಡುತಾ ನನ್ನನೇ’ ಎಂಬ ಈ ಹಾಡಿಗೆ ಸಂಜೀತ್ ಹೆಗ್ಡೆ ಧ್ವನಿಯಾಗಿದ್ದು ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ ಪುನೀತ್ ಆಚಾರ್ಯ ಅವರ ಸಾಹಿತ್ಯವಿದೆ. ಚಿತ್ರವನ್ನು ಗುರು ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ.
****